ಮುಂಬೈ: ಮಹಾರಾಷ್ಟ್ರದ ಜನಾ ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ ಪ್ರಕರಣವೊಂದು ದಾಖಲಾಗಿದೆ. ಅವಿವಾಹಿತ ಪುತ್ರಿ ಗರ್ಭಿಣಿಯೆಂದು ತಿಳಿದ ತಂದೆ ಆಕೆಯನ್ನು ಕೊಲೆ ಮಾಡಿದ ಘಟನೆ ನಡೆದಿದೆ.
									
			
			 
 			
 
 			
					
			        							
								
																	ಸಾಮ್ ಧಾನ್ ದುಕಾರೆ ಎಂಬಾತ ಆರೋಪಿ. ಈತ ತನ್ನ ಕಾಲೇಜು ಓದುತ್ತಿದ್ದ ಪುತ್ರಿಯನ್ನು ತನ್ನ ಸಂಬಂಧಿಕರ ಸಹಾಯದಿಂದ ರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿದ್ದಾನೆ. ಇದೀಗ ತಂದೆ ಸಾಮ್ ಧಾನ್ ಮತ್ತು ನಾಲ್ವರು ಸಂಬಂಧಿಕರನ್ನು ಪೊಲೀಸರು ಬಂಧಿಸಿದ್ದಾರೆ.
									
										
								
																	20 ವರ್ಷದ ಯುವತಿ ಚಾಯಾ ಕೊಲೆಗೀಡಾದ ದುರ್ದೈವಿ. ಈಕೆ ಪುಣೆಯ ಕಾಲೇಜೊಂದರಲ್ಲಿ ಓದುತ್ತಿದದ್ದಳು. ಇಲ್ಲಿ ಯುವಕನೊಬ್ಬನೊಂದಿಗೆ ಈಕೆಗೆ ಅಫೇರ್ ಇತ್ತು. ಈತನಿಂದ ಪುತ್ರಿ ಗರ್ಭಿಣಿಯಾಗಿದ್ದಾಳೆಂದು ತಿಳಿದ ತಂದೆ ಸಂಬಂಧಿಕರ ಜತೆಗೂಡಿ ಈ ಕೃತ್ಯವೆಸಗಿದ್ದಾನೆ.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.