Publish Date: Thu, 29 Nov 2018 (08:58 IST)
Updated Date: Thu, 29 Nov 2018 (09:00 IST)
ನವದೆಹಲಿ: ರಾಹುಲ್ ಗಾಂಧಿ ಗೋತ್ರ, ಜಾತಿ ವಿವರಣೆಯನ್ನು ಇತ್ತೀಚೆಗೆ ಪುಷ್ಕರ್ ನ ಪುರೋಹಿತರೊಬ್ಬರು ಹೇಳಿದ ಬೆನ್ನಲ್ಲೇ ಇದೀಗ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಜಾತಕ ಬಯಲು ಮಾಡಿದ್ದಾರೆ.
ರಾಹುಲ್ ಗಾಂಧಿ ಗೋತ್ರದ ಬಗ್ಗೆ ಪುರೋಹಿತರು ಹೇಳಿದ್ದನ್ನು ಬಿಜೆಪಿ ಲೇವಡಿ ಮಾಡಿತ್ತು. ಇದರ ಬೆನ್ನಲ್ಲೇ ವ್ಯಕ್ತಿಯೊಬ್ಬ ಟ್ವಿಟರ್ ನಲ್ಲಿ ಸ್ಮೃತಿ ಇರಾನಿಗೆ ನಿಮ್ಮ ಮತ್ತು ನಿಮ್ಮ ಪತಿಯ ಗೋತ್ರ ಯಾವುದು? ನಿಮ್ಮ ಹಣೆಯಲ್ಲಿ ಇಡುವ ಕುಂಕುಮ ಸಂಪ್ರದಾಯಕ್ಕೋ? ಫ್ಯಾಶನ್ ಗೋ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದ.
ಇದಕ್ಕೆ ತಕ್ಕ ತಿರುಗೇಟು ನೀಡಿರುವ ಸ್ಮೃತಿ ಇರಾನಿ ತಮ್ಮ ಜಾತಕವನ್ನೇ ಬಯಲು ಮಾಡಿದ್ದಾರೆ. ‘ನನ್ನ ಗೋತ್ರ ಕೌಶಲ್ ಸರ್. ನನ್ನ ತಂದೆ, ಅವರ ತಂದೆ ಹಾಗೂ ಅವರ ತಂದೆಯದ್ದೂ ಇದೇ ಆಗಿತ್ತು. ನನ್ನ ಪತಿ ಮತ್ತು ಮಕ್ಕಳು ಜೊರಾಸ್ಟ್ರಿಯನ್ನರು. ಹೀಗಾಗಿ ಅವರಿಗೆ ಗೋತ್ರವಿಲ್ಲ. ನಾನು ಹಣೆಯ ಮೇಲಿಡುವ ಸಿಂಧೂರ ನನ್ನ ನಂಬಿಕೆ, ಹಾಗೆಯೇ ಹಿಂದೂ ಧರ್ಮದ ಪದ್ಧತಿ. ಈಗ ನೀನು ನಿನ್ನ ಕೆಲಸಗಳಿಗೆ ಮರಳು. ಧನ್ಯವಾದ’ ಎಂದು ಸ್ಮೃತಿ ಇರಾನಿ ಪ್ರಶ್ನೆ ಕೇಳಿದ ವ್ಯಕ್ತಿಗೆ ವಿವರವಾಗಿ ಉತ್ತರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.