Select Your Language

Notifications

webdunia
webdunia
webdunia
webdunia

ಮೊಮ್ಮಗಳ ಮೇಲೇ ಅತ್ಯಾಚಾರ ಮಾಡಿ ಸಿಕ್ಕಿ ಬಿದ್ದ ತಾತ

ಮೊಮ್ಮಗಳ ಮೇಲೇ ಅತ್ಯಾಚಾರ ಮಾಡಿ ಸಿಕ್ಕಿ ಬಿದ್ದ ತಾತ
ಮುಂಬೈ , ಬುಧವಾರ, 28 ನವೆಂಬರ್ 2018 (09:01 IST)
ಮುಂಬೈ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೊಮ್ಮಗಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿ ಆಕೆ ಗರ್ಭಿಣಿಯಾಗುವಂತೆ ಮಾಡಿದ 65 ವರ್ಷದ ವೃದ್ಧನನ್ನು ಮುಂಬೈಯಲ್ಲಿ ಬಂಧಿಸಲಾಗಿದೆ.

ಹಗಲು ಹೊತ್ತು ಪೋಷಕರು ನೌಕರಿಗೆ ಹೋಗಿದ್ದಾಗ 15 ವರ್ಷದ ಮೊಮ್ಮಗಳ ಮೇಲೆ ಈ ತಾತ ಅತ್ಯಾಚಾರವೆಸಗುತ್ತಿದ್ದ. ಬಳಿಕ ಯಾರಿಗಾದರೂ ಹೇಳಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಹೀಗಾಗಿ ಬಾಲಕಿ ಯಾರಲ್ಲೂ ಬಾಯಿಬಿಟ್ಟಿರಲಿಲ್ಲ.

ಆದರೆ ಇದ್ದಕ್ಕಿದ್ದಂತೆ ಬಾಲಕಿ ಹೊಟ್ಟೆನೋವು ಎಂದಾಗ ಪೋಷಕರು ಆಕೆಯನ್ನು ವೈದ್ಯರ ಬಳಿಗೆ ಕರೆದೊಯ್ದಿದ್ದು, ಆಗ ಆಕೆ 6 ತಿಂಗಳ ಗರ್ಭಿಣಿ ಎನ್ನುವುದು ಗೊತ್ತಾಗಿದೆ. ಈ ಬಗ್ಗೆ ಬಾಲಕಿಯನ್ನು ವಿಚಾರಿಸಿದಾಗ ತನ್ನ ಮೇಲಾದ ಅತ್ಯಾಚಾರವನ್ನು ಆಕೆ ಬಾಯ್ಬಿಟ್ಟಿದ್ದಾಳೆ. ತಕ್ಷಣವೇ ಪೋಷಕರು ತಾತನ ವಿರುದ್ಧ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಅಸಹಜ ಸೆಕ್ಸ್ ಮಾಡಲು ನಿರಾಕರಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದ ಯುವಕ!