Publish Date: Mon, 04 Sep 2017 (17:45 IST)
Updated Date: Mon, 04 Sep 2017 (17:49 IST)
ಕಂದಾಯ ಇಲಾಖೆ ಅಧಿಕಾರಿಗಳ ಭ್ರಷ್ಟಾಚಾರದಿಂದ ಬೇಸತ್ತ ರೈತರಿಬ್ಬರು ಟಿಆರ್`ಎಸ್ ಶಾಸಕನ ಕಚೇರಿ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತೆಲಂಗಾಣ ರಾಜ್ಯದ ಕರೀಂನಗರದಲ್ಲಿ ನಡೆದಿದೆ.
ಟಿಆರ್`ಎಸ್ ಶಾಸಕ ರಸಮಾಯಿ ಬಾಲಕೃಷ್ಣನ್ ಕಚೇರಿ ಮುಂದೆ ಈ ಘಟನೆ ನಡೆದಿದೆ. 25 ವರ್ಷದ ಶ್ರೀನಿವಾಸ್ ಮತ್ತು 23 ವರ್ಷದ ಪರಶುರಾಮುಲು ಆತ್ಮಹತ್ಯೆಗೆ ಯತ್ನಿಸಿದ ರೈತರು. ಗಂಭೀರ ಗಾಯಗೊಂಡಿರುವ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೈತರಾದ ಶ್ರೀನಿವಾಸ್ ಮತ್ತು ಪರಶುರಾಮ್ ಬಡ ರೈತರ ಅನುಕೂಲಕ್ಕಾಗಿ ಇರುವ ಯೋಜನೆಯೊಂದರ ಅನುಕೂಲ ಪಡೆಯಲು ಸ್ಥಳೀಯ ಕಂದಾಯ ಇಲಾಖೆ ಕಚೇರಿಗೆ ತೆರಳಿದ್ದಾರೆ.ಆದರೆ, ಅಲ್ಲಿನ ಅಧಿಕಾರಿ ಕೆಲಸ ಮಾಡಿಕೊಡಲು 20,000 ರೂ. ಲಂಚದ ಬೇಡಿಕೆ ಇಟ್ಟಿದ್ದಾನೆ. ಇದರಿಂದ ನೊಂದ ರೈತರು ಬೆಳಗ್ಗೆಯಿಂದ ಸಂಜೆವರೆಗೆ ಶಾಸಕರಿಗಾಗಿ ಕಚೇರಿ ಮುಂದೆ ಕಾದಿದ್ದಾರೆ. ಎಷ್ಟೆ ಕಾದರೂ ಶಾಸಕರು ಸಿಗದಿದ್ದಾಗ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನಾವು ಬೆಳಗ್ಗೆ 10 ಗಂಟೆಯಿಂದ 3.300ರವರೆಗೂ ಕಾದರೂ ಶಾಸಕರು ಬರಲಿಲ್ಲ. ಾದರೆ, ಬಳಿಕ ಶಾಸಕರ ಜೊತೆ ಸಭೆ ನಡೆಸದೇ ನಮ್ಮನ್ನ ತೆರಳಲು ಸೂಚಿಸಿದರು. ದಾರಿಕಾಣದೇ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ರೈತರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ