Publish Date: Tue, 29 Aug 2017 (16:27 IST)
Updated Date: Tue, 29 Aug 2017 (16:30 IST)
ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹನುಮಾಪುರ ತಾಂಡಾದಲ್ಲಿ ಯುವಕನೊಬ್ಬ ಬಲವಂತವಾಗಿ ಮುತ್ತು ಕೊಟ್ಟಿದ್ದಕ್ಕೆ ಯುವತಿ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
ಹನುಮಾಪುರದಲ್ಲಿ ತಾಂಡದಲ್ಲಿ ಸಂತೋಷ್ ಎನ್ನುವ ಯುವಕ ಆಗಸ್ಟ್ 26 ರಂದು 19 ವರ್ಷ ವಯಸ್ಸಿನ ರೇಷ್ಮಾ ಲಮಾಣಿ ಎನ್ನುವ ಯುವತಿಗೆ ಬಲವಂತವಾಗಿ ಮುತ್ತು ಕೊಟ್ಟಿದ್ದನು ಎನ್ನಲಾಗಿದೆ.
ಸಂಬಂಧಿಕರ ಮುಂದೆ ಹೇಗೆ ಮುಖ ತೋರಿಸುವುದು ಎಂದು ಹೆದರಿದ ಯುವತಿ ರೇಷ್ಮಾ ತುಂಗಾ ಮೇಲ್ದಂಡೆ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಯುವತಿಯ ಆತ್ಮಹತ್ಯೆ ಸುದ್ದಿ ತಿಳಿದ ಆರೋಪಿ ಸಂತೋಷ್ ಪರಾರಿಯಾಗಿದ್ದಾನೆ.
ಆರೋಪಿ ಸಂತೋಷನನ್ನು ಕೂಡಲೇ ಬಂಧಿಸಬೇಕು ಎಂದು ರೇಷ್ಮಾಳ ಪೋಷಕರು ಪೊಲೀಸ್ ಠಾಣೆಯ ಮುಂದೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.