Publish Date: Sun, 27 Aug 2017 (08:42 IST)
Updated Date: Sun, 27 Aug 2017 (08:47 IST)
ಕರಾಚಿ: ಪಾಕಿಸ್ತಾನದಲ್ಲಿ ಮತ್ತೆ ಕ್ರಿಕೆಟ್ ಚಿಗುರಿಸಲು ಅಲ್ಲಿನ ಮಂಡಳಿ ಶತಾಯ ಗತಾಯ ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ಸೆಪ್ಟೆಂಬರ್ ನಲ್ಲಿ ವಿಶ್ವ ಇಲೆವೆನ್ ಟಿ20 ಸರಣಿ ನಡೆಯಲಿದೆ.
ಈ ಸರಣಿಗೆ ಪಿಸಿಬಿ ಜತೆ ಐಸಿಸಿಯೂ ಕೈ ಜೋಡಿಸಿದೆ. ಈ ಸುದ್ದಿ ಬಂದ ಬೆನ್ನಲ್ಲೇ ಮಾಜಿ ನಾಯಕ ಶಾಹಿದ್ ಅಫ್ರಿದಿ ಟ್ವೀಟ್ ಮಾಡಿದ್ದು, ಭಾರತ ತಂಡದ ಆಟಗಾರರನ್ನು ಆಹ್ವಾನಿಸಿದ್ದಾರೆ.
‘ಪಿಸಿಬಿಯ ಇಂತಹದ್ದೊಂದು ನಿರ್ಧಾರ ನಿಜಕ್ಕೂ ಸ್ವಾಗತ. ಒಂದು ವೇಳೆ ಭಾರತೀಯ ಆಟಗಾರರೂ ಬಂದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು’ ಎಂದು ಅಫ್ರಿದಿ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. ಆದರೆ ಭಾರತ ಗಡಿಯಾಚೆಗಿನ ಭಯೋತ್ಪಾನೆ ನಿಲ್ಲುವವರೆಗೂ ಪಾಕ್ ನೊಂದಿಗೆ ಕ್ರಿಕೆಟ್ ಸಾಧ್ಯವಿಲ್ಲ ಎಂದು ಪಟ್ಟು ಹಿಡಿದು ಕೂತಿದೆ.