Publish Date: Mon, 04 Sep 2017 (17:33 IST)
Updated Date: Mon, 04 Sep 2017 (17:36 IST)
ನಾವು ವಿಪಕ್ಷದಲ್ಲಿದ್ದಾಗ ಬಳ್ಳಾರಿಗೆ ನಡೆದುಕೊಂಡು ಹೋಗಿದ್ದೇವೆ. ಅದರಂತೆ, ಬಿಜೆಪಿಯವರು ಕೂಡಾ ಮಂಗಳೂರಿಗೆ ನಡೆದುಕೊಂಡು ಹೋಗಲಿ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಸಲಹೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಮಂಗಳೂರಿಗೆ ನಡೆದುಕೊಂಡು ಹೋದಲ್ಲಿ ಸಂಚಾರಿ ನಿಯಮಾವಳಿಗಳು ಅನ್ವಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿ ಯುವಮೋರ್ಚಾದವರು ಬೈಕ್ ರ್ಯಾಲಿಯ ಬಗ್ಗೆ ಅನುಮತಿ ಕೇಳಿದ್ದಾರೆ. ಆಯಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಅನುಮತಿ ನೀಡುವ ಬಗ್ಗೆ ನಿರ್ಧರಿಸುತ್ತಾರೆ. ಎಷ್ಟು ಜನ ತೆರಳಲಿದ್ದಾರೆ? ಅವರ ಡ್ರೈವಿಂಗ್ ಲೈಸೆನ್ಸ್, ಮತ್ತಿತರ ಸಂಪೂರ್ಣ ವಿವರಗಳನ್ನು ನೀಡಬೇಕಾಗುತ್ತದೆ ಎಂದರು.
ಬೆಂಗಳೂರಿನಿಂದ ಬಳ್ಳಾರಿಯವರೆಗೆ ಕಾಂಗ್ರೆಸ್ ಪಕ್ಷ ಪಾದಯಾತ್ರೆ ಮೂಲಕ ತೆರಳಿ ಪ್ರತಿಭಟನೆ ನಡೆಸಿತ್ತು. ಅದರಂತೆ ಬಿಜೆಪಿಯವರು ಕೂಡಾ ಮಂಗಳೂರಿಗೆ ನಡೆದು ಹೋದರೆ ಸಮಸ್ಯೆ ಎದುರಾಗುವುದಿಲ್ಲ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.