Select Your Language

Notifications

webdunia
webdunia
webdunia
webdunia

ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಮಾಡೆಲ್..!

ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಮಾಡೆಲ್..!
ಚಿತ್ತೂರು , ಗುರುವಾರ, 24 ಆಗಸ್ಟ್ 2017 (17:52 IST)
ರೆಡ್ ಸ್ಯಾಂಡಲ್ ಸ್ಮಗ್ಲಿಂಗ್ ಆರೋಪದಲ್ಲಿ ಸಿಲುಕಿರುವ ಮಾಡೆಲ್ ಸಂಗೀತ ಚಟರ್ಜಿ ಚಿತ್ತೂರು ಉಪಕಾರಾಗೃಹದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮಾಡೆಲ್ ಸಂಗೀತ ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ  ಯತ್ನಿಸಿದ್ದು, ಇದನ್ನ ಗಮನಿಸಿದ ವಾರ್ಡ್ ಬಾಯ್ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾನೆ. ಸದ್ಯ, ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

2016ರಲ್ಲಿ ಕೋಲ್ಕತ್ತಾದ ಅಪಾರ್ಟ್`ಮೆಂಟ್`ನಲ್ಲಿ ಸಂಗೀತಾ ಚಟರ್ಜಿಯನ್ನ ಪೊಲೀಸರು ಬಂಧಿಸಿದ್ದರು. ದೇಶದ ಅತಿ ದೊಡ್ಡ ರೆಡ್ ಸ್ಯಾಂಡಲ್ ಹಗರಣದ ಜಾಲದಲ್ಲಿ ಭಾಗಿಯಾಗಿದ್ದ ಆರೋಪದಡಿ ನಟಿಯನ್ನ ಬಂಧಿಸಲಾಗಿತ್ತು. ಕುಖ್ಯಾತ ಸಂಗೀತಾ, ಅಂತಾರಾಷ್ಟ್ರೀಯ ರೆಡ್ ಸ್ಯಾಂಡಲ್ ಸ್ಮಗ್ಲರ್ ಮಾರ್ಕೊಂಡನ್ ಲಕ್ಷ್ಮಣ್ ಅಲಿಯಾಸ್ ಲಕ್ಷ್ಮಣ್ ದಂಗೆಯ ಗರ್ಲ್ ಫ್ರೆಂಡ್ ಎಂದು ಪೊಲೀಸರು ಶಂಕಿಸಿದ್ದು, 2014ರಲ್ಲೇ ಚಿತ್ತೂರು ಪೊಲೀಸರು ನೇಪಾಳದಲ್ಲಿ ಆತನನ್ನ ಬಂಧಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಬಿಜೆಪಿ ಚುನಾವಣೆ ಉಸ್ತುವಾರಿಯಾಗಿ ಜಾವ್ಡೇಕರ್: ಅಮಿತ್ ಶಾ ಆದೇಶ