Publish Date: Sat, 02 Sep 2017 (13:22 IST)
Updated Date: Sat, 02 Sep 2017 (13:24 IST)
ಪ್ರತಿಭಾವಂತ ವಿದ್ಯಾರ್ಥಿನಿ ಅನಿತಾ ಆತ್ಮಹತ್ಯೆ ಕುರಿತಂತೆ ಸೂಪರ್‌ಸ್ಟಾರ್‌ಗಳು ಕಂಬನಿ ಮಿಡಿದ ಘಟನೆ ವರದಿಯಾಗಿದೆ.
ನೀಟ್ ಪರೀಕ್ಷೆಯಿಂದಾಗಿ ಎಂಬಿಬಿಎಸ್ ಸೀಟ್ ದೊರೆಯಲಿಲ್ಲ ಎನ್ನುವ ಕಾರಣಕ್ಕೆ ಅನಿತಾ ಆತ್ಮಹತ್ಯೆಗೆ ಶರಣಾಗಿದ್ದರು. ಅನಿತಾ ಆತ್ಮಹತ್ಯೆ ವಿರೋಧಿಸಿ ರಾಜ್ಯದಾದ್ಯಂತ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ.
ಅನಿತಾ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸೂಪರ್ ಸ್ಟಾರ್ ರಜನಿಕಾಂತ್, ಅನಿತಾ ಆತ್ಮಹತ್ಯೆಗೆ ಸಂತಾಪವಿದೆ. ದೇವರು ಆಕೆಯ ಕುಟುಂಬಕ್ಕೆ ದುಖಃವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಮತ್ತೊಬ್ಬ ಸೂಪರ್‌ಸ್ಟಾರ್ ಕಮಲ್‌ಹಾಸನ್, ಅನಿತಾ ಆತ್ಮಹತ್ಯೆಯಿಂದ ಬಡವರಿಗೆ ವೈದ್ಯಕೀಯ, ಇಂಜಿನಿಯರಿಂಗ್ ಪದವಿ ಶಿಕ್ಷಣಗಳು ಇವತ್ತಿಗೂ ಗಗನ ಕುಸುಮವಾಗಿವೆ. ದೇವರು ಆಕೆಯ ಆತ್ಮಕ್ಕೆ ಶಾಂತಿ ನೀಡಲಿ ಎಂದು ಶೃದ್ಧಾಂಜಲಿ ಅರ್ಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.