Select Your Language

Notifications

webdunia
webdunia
webdunia
webdunia

ಜನರನ್ನು ಮೂರ್ಖರನ್ನಾಗಿಸಲು ಎಐಎಡಿಎಂಕೆ ಬಣಗಳ ಮೈತ್ರಿ: ಕಮಲ್‌ಹಾಸನ್ ವಾಗ್ದಾಳಿ

ಜನರನ್ನು ಮೂರ್ಖರನ್ನಾಗಿಸಲು ಎಐಎಡಿಎಂಕೆ ಬಣಗಳ ಮೈತ್ರಿ: ಕಮಲ್‌ಹಾಸನ್ ವಾಗ್ದಾಳಿ
ಚೆನ್ನೈ , ಸೋಮವಾರ, 21 ಆಗಸ್ಟ್ 2017 (18:49 IST)
ಎಐಎಡಿಎಂಕೆ ಪಕ್ಷದ ಎರಡು ಬಣಗಳು ಒಂದಾಗಿ ರಾಜ್ಯದ ಜನತೆಯನ್ನು ಮೂರ್ಖರನ್ನಾಗಿಸುತ್ತಿವೆ ಎಂದು ಖ್ಯಾತ ನಟ ಕಮಲ್‌ಹಾಸನ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ.  
ಗಾಂಧಿ ಟೋಪಿ, ಕಾಶ್ಮಿರಿ ಟೋಪಿ ಮತ್ತು ಇದೀಗ ಜೋಕರ್ ಟೋಪಿ ಇಷ್ಟು ಟೋಪಿಗಳು ಸಾಕಾ ಇನ್ನೂ ಬೇಕಾ ತಮಿಳರೇ ದಯವಿಟ್ಟು ಉತ್ತರಿಸಿ ಎಂದು ಟ್ವೀಟ್ ಮಾಡಿದ್ದಾರೆ.
 
ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಬಣ ಮತ್ತು ಪನ್ನೀರ್ ಸೆಲ್ವಂ ಬಣ ಇಂದು ಮಧ್ಯಾಹ್ನ ಒಂದಾದ ಹಿನ್ನೆಲೆಯಲ್ಲಿ ಕಮಲ್ ಹಾಸನ್ ಹೇಳಿಕೆ ಹೊರಬಿದ್ದಿದೆ. 
 
ಎಐಎಡಿಎಂಕೆ ಪಕ್ಷದಲ್ಲಿ ಇಂದು ನಡೆದ ಬೆಳವಣಿಗೆಯಲ್ಲಿ ಉಭಯ ಬಣಗಳು ವಿಲೀನಗೊಂಡಿವೆ. ಪನ್ನೀರ್ ಸೆಲ್ವಂ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಲ್ಲದೇ ಎಐಎಡಿಎಂಕೆ ಪಕ್ಷದ ಸಂಚಾಲಕರಾಗಿ ಮುಂದುವರಿಯಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಚಿವ ಎಚ್‌.ವೈ. ಮೇಟಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು