Publish Date: Mon, 25 Sep 2017 (07:42 IST)
Updated Date: Mon, 25 Sep 2017 (07:43 IST)
ನವದೆಹಲಿ: ಡೇರಾ ಬಾಬಾನ ಅತ್ಯಾಚಾರಗಳ ಪುರಾಣ ಮರೆಯಾಗುವ ಮುನ್ನವೇ ಇನ್ನೊಬ್ಬ ಸ್ವಯಂ ಘೋಷಿತ ದೇವಮಾನವ ಚರಿತ್ರೆ ಬಯಲಾಗಿದೆ.
ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಸ್ವಯಂ ಘೋಷಿತ ದೇವಮಾನವ ಫಲಹರಿ ಮಹಾರಾಜ್ ಮೇಲೆ ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೋರ್ವಳು ಅತ್ಯಾಚಾರ ಆರೋಪ ಮಾಡಿದ್ದಾಳೆ.
ಕಳೆದ ತಿಂಗಳು ಬಾಬಾ ಆಶ್ರಮಕ್ಕೆ ತೆರಳಿದ್ದಾಗ ತನ್ನನ್ನು ರಾತ್ರಿ ಬಲವಂತವಾಗಿ ಉಳಿಸಿಕೊಂಡಿದ್ದಲ್ಲದೆ, ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ಅತ್ಯಾಚಾರ ಮಾಡುವ ಮೊದಲು ಬಾಬಾ ತನ್ನ ನಾಲಿಗೆಯಲ್ಲಿ ಜೇನು ತುಪ್ಪದಲ್ಲಿ ಓಂ ಎಂದು ಬರೆದಿದ್ದೇನೆ. ಅದನ್ನು ನೀನು ನೆಕ್ಕು ಎಂದಿದ್ದರು. ನಂತರ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಇದೀಗ ಅತ್ಯಾಚಾರಿ ಫಲಹರಿ ಬಾಬಾರನ್ನು ಬಂಧಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ