Publish Date: Wed, 20 Sep 2017 (11:09 IST)
Updated Date: Wed, 20 Sep 2017 (11:11 IST)
ಹೈದರಾಬಾದ್: 13 ವರ್ಷದ ಬಾಲಕಿಯೊಬ್ಬಳು ಮರ್ಯಾದಾ ಹತ್ಯೆಗೆ ಬಲಿಯಾದ ಘಟನೆ ತೆಲಂಗಾಣ ರಾಜ್ಯದಲ್ಲಿ ನಡೆದಿದೆ. ಹುಡುಗನೊಂದಿಗೆ ಸ್ನೇಹದಿಂದ ಇದ್ದ ಕಾರಣಕ್ಕೆ ತಂದೆಯೇ ಮಗಳನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.
ಮಗಳನ್ನು ಕೊಲೆ ಮಾಡಿ ಬೆಂಕಿ ಹಚ್ಚಿ ಮೃತದೇಹ ಸುಟ್ಟು ಹಾಕಿದ್ದ ತಂದೆ ನಂತರ ಇದೊಂದು ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ನಡೆಸಿದ್ದ. ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಹತ್ಯೆಗೀಡಾಗಿರುವುದು ಪತ್ತೆಯಾಗಿದೆ. ಮೃತಳನ್ನು ರಾಧಿಕಾ ಎಂದು ಗುರುತಿಸಲಾಗಿದ್ದು, ಆಕೆ 7 ನೇ ತರಗತಿ ಓದುತ್ತಿದ್ದಳು ಎನ್ನಲಾಗಿದೆ.
ಶಾಲೆ ಬಿಟ್ಟ ನಂತರ ಹುಡುಗನೊಂದಿಗೆ ಮಾತನಾಡುವುದನ್ನು ಕಂಡಿದ್ದ ತಂದೆ ಮನೆಗೆ ಬಂದೊಡನೆ ಮಗಳನ್ನು ಹಿಗ್ಗಾ ಮುಗ್ಗಾ ಹೊಡೆದಿದ್ದ. ಈ ಗಲಾಟೆಯಲ್ಲಿ ಮಗಳನ್ನು ಗೋಡೆಗೆ ಚಚ್ಚಿ ಕೊಲೆ ಮಾಡಿದ್ದ. ನಂತರ ಪತ್ನಿಯ ಸಹಾಯದೊಂದಿಗೆ ಶವವನ್ನು ಸುಟ್ಟು ಅಜ್ಞಾತ ಸ್ಥಳದಲ್ಲಿ ಬಿಸಾಡಿದ್ದ. ಇದೀಗ ಪೊಲೀಸರು ಇಬ್ಬರನ್ನೂ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ