Publish Date: Sat, 16 Sep 2017 (09:32 IST)
Updated Date: Sat, 16 Sep 2017 (09:34 IST)
ನವದೆಹಲಿ: ಅತ್ಯಾಚಾರ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ ಸಂಘಟನೆ ಮುಖ್ಯಸ್ಥ ಗುರ್ಮೀತ್ ಬಾಬಾನ ವಿರುದ್ಧದ ಮತ್ತೆರಡು ಪ್ರಕರಣಗಳು ಇಂದು ವಿಚಾರಣೆ ನಡೆಯಲಿದೆ.
ಎರಡು ಕೊಲೆ ಪ್ರಕರಣಗಳ ವಿಚಾರವಾಗಿ ವಿಶೇಷ ಸಿಬಿಐ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಈ ಹಿನ್ನಲೆಯಲ್ಲಿ ಪಂಚಕುಲಾದಲ್ಲಿ ಅರೆಸೇನಾ ಪಡೆ ಭದ್ರತೆ ಒದಗಿಸಲಾಗಿದೆ. ಹಿಂದೆ ನಡೆದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ರಾಮ್ ರಹೀಂ ವಿಚಾರಣೆಯಲ್ಲಿ ಪಾಲ್ಗೊಳ್ಳಲಿದ್ದಾನೆ. ಹೀಗಾಗಿ ಜೈಲು, ಕೋರ್ಟ್ ಸುತ್ತಮುತ್ತ ಹಾಗೂ ಡೇರಾ ಆಶ್ರಮದ ಬಳಿ ಬಿಗಿ ಭದ್ರತೆ ಒದಗಿಸಲಾಗಿದೆ. ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹಾಗೂ ಡೇರಾದ ಮಾಜಿ ಮ್ಯಾನೇಜರ್ ರಂಜಿತ್ ಸಿಂಗ್ ಕೊಲೆ ಪ್ರಕರಣದ ವಿಚಾರಣೆ ನಡೆಯಲಿದೆ.