Publish Date: Thu, 14 Sep 2017 (09:42 IST)
Updated Date: Thu, 14 Sep 2017 (09:44 IST)
ನವದೆಹಲಿ: ಡೇರಾ ಮುಖ್ಯಸ್ಥ ಬಾಬಾ ರಾಮ್ ರಹೀಂ ಸಿಂಗ್ ದಿನಕ್ಕೊಂದು ಹುಡುಗಿಯರ ಮೇಲೆ ತನ್ನ ಖಾಸಗಿ ಬಂಗಲೆಯಲ್ಲಿ ಅತ್ಯಾಚಾರವೆಸಗುತ್ತಿದ್ದ ಎಂಬುದು ಸಾಬೀತಾಗಿತ್ತು. ಆದರೆ ಕೆಲವು ಮಹಿಳೆಯರು ಋತುಚಕ್ರದ ಕಾರಣ ನೀಡಿ ಬಾಬಾನ ಹಿಡಿತದಿಂದ ತಪ್ಪಿಸಿಕೊಳ್ಳುತ್ತಿದ್ದರಂತೆ.
ಈ ಬಗ್ಗೆ ಯುವತಿಯೊಬ್ಬಳು ತನ್ನ ಅನುಭವ ಹಂಚಿಕೊಂಡಿದ್ದಾಳೆ. ಪ್ರತೀ ದಿನ ರಾತ್ರಿ 11 ಗಂಟೆ ವೇಳೆಗೆ ಬಾಬಾ ಒಬ್ಬ ಮಹಿಳೆಯನ್ನ ಮಂಚಕ್ಕೆ ಕರೆಯುತ್ತಿದ್ದ. ನನಗೂ ಒಂದು ದಿನ ಕರೆ ನೀಡಿದ್ದ.
ಅದರಂತೆ ಬಾಬಾರ ವಿಲಾಸಿ ಬೆಡ್ ರೂಂಗೆ ಹೋದಾಗ ಆತ ಬೆಡ್ ಮೇಲೆ ಕುಳಿತುಕೊಂಡು ಪೋರ್ನ್ ವಿಡಿಯೋ ವೀಕ್ಷಿಸುತ್ತಿದ್ದ. ನನಗೆ ಆತನ ಪಕ್ಕದಲ್ಲೇ ಕೂರಲು ಹೇಳಿದ. ಆದರೆ ಆತನ ಉದ್ದೇಶ ತಿಳಿದು, ನಾನು ಋತುಮತಿಯಾಗಿದ್ದೇನೆ. ಬಾಬಾ ಎದುರಿಗೆ ಬರುವ ಅರ್ಹತೆ ಇಲ್ಲ ಎಂದು ಸುಳ್ಳು ಹೇಳಿದ್ದೆ. ಹೀಗೇ ಹಲವರು ಬಾಬಾನ ಅತ್ಯಾಚಾರದಿಂದ ತಪ್ಪಿಸಿಕೊಳ್ಳುತ್ತಿದ್ದರು ಎಂದು ಮಹಿಳೆ ಬಹಿರಂಗಪಡಿಸಿದ್ದಾಳೆ.