Publish Date: Mon, 11 Sep 2017 (08:46 IST)
Updated Date: Mon, 11 Sep 2017 (08:49 IST)
ನವದೆಹಲಿ: ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಡೇರಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ದತ್ತುಪುತ್ರಿ ಹನಿ ಪ್ರೀತ್ ಸಿಂಗ್ ಪತ್ತೆಗಾಗಿ ಪೊಲೀಸರು ಪ್ರಯತ್ನ ನಡೆಸುತ್ತಿದ್ದು, ಆಕೆ ನೇಪಾಳಕ್ಕೆ ಪಲಾಯನ ಮಾಡಿರಬಹದು ಎಂದು ಶಂಕಿಸಲಾಗಿದೆ.
ಈ ಹಿನ್ನಲೆಯಲ್ಲಿ ಪೊಲೀಸರು ನೇಪಾಳ ಗಡಿಯಲ್ಲಿ ಹನಿಪ್ರೀತ್ ಪತ್ತೆಗಾಗಿ ನೋಟೀಸ್ ಅಂಟಿದ್ದಾರೆ. ಬಾಬಾ ಬಂಧನದ ಸಮಯದಲ್ಲಿ ಆತ ತಪ್ಪಿಸಿಕೊಳ್ಳಲು ಸಹಾಯ ಮಾಡಲೆತ್ನಿಸಿದ ಆರೋಪ ಹನಿಪ್ರೀತ್ ಮೇಲಿದೆ.
ಈಗಾಗಲೇ ಹರಿಯಾಣ ಪೊಲೀಸರು ನೇಪಾಳ ಗಡಿ ಭಾಗದಲ್ಲಿ ಹನಿಪ್ರೀತ್ ಗಾಗಿ ಶೋಧ ನಡೆಸಿದ್ದಾರೆ ಎನ್ನಲಾಗಿದೆ. ನೇಪಾಳ ಗಡಿಯಲ್ಲಿ ಹರಿಯಾಣ ದಾಖಲಾತಿಯ ವಾಹನವೊಂದು ಪತ್ತೆಯಾಗಿದ್ದು, ಪೊಲೀಸರ ಶಂಕೆ ಹೆಚ್ಚಿಸಿದೆ.