Publish Date: Thu, 07 Sep 2017 (10:28 IST)
Updated Date: Thu, 07 Sep 2017 (10:31 IST)
ಬೆಂಗಳೂರು: ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಬೇಧಿಸಲು ನೇಮಕಗೊಂಡಿರುವ ಬಿಕೆ ಸಿಂಗ್ ನೇತೃತ್ವದ ಎಸ್ಐಟಿ ತಂಡ ಗೌರಿ ನಿವಾಸಕ್ಕೆ ಆಗಮಿಸಿದೆ.
ಮನೆಯ ಮುಂದೆ ಹೆಲ್ಮೆಟ್ ಧರಿಸಿದ್ದ ಹಂತಕನ ಗುಂಡೇಟಿಗೆ ಗೌರಿ ಬಲಿಯಾಗಿದ್ದರು. ಇದೀಗ ಮನೆಯ ಮುಂದೆ ಪೊಲೀಸ್ ಸರ್ಪಗಾವಲು ಇದೆ.
ಗೌರಿ ನಿವಾಸ ಸುತ್ತಮುತ್ತ ತನಿಖೆ ನಡೆಸಲು ಎಸ್ಐಟಿ ತಂಡ ಆಗಮಿಸಿದ್ದು, ತೀವ್ರ ತಪಾಸಣೆ ನಡೆಸುತ್ತಿದೆ. ಇನ್ನೊಂದೆಡೆ ಹತ್ಯೆ ಪ್ರಕರಣ ಬೇಧಿಸಲು ನೇಮಕವಾದ ಎಸ್ಐಟಿ ತಂಡದ ವಿರುದ್ಧ ಅಸಮಾಧಾನವೂ ಕೇಳಿಬಂದಿದೆ. ಬಿಕೆ ಸಿಂಗ್ ನೇತೃತ್ವದ ಎಸ್ಐಟಿ ತಂಡದ ಬದಲು ಪ್ರಕರಣವನ್ನು ಸಿಬಿಐಗೆ ವಹಿಸಬೇಕಿತ್ತು ಎಂಬ ಮಾತು ಕೇಳಿ ಬಂದಿದೆ.