Publish Date: Fri, 08 Sep 2017 (08:30 IST)
Updated Date: Fri, 08 Sep 2017 (08:32 IST)
ಸಿರ್ಸಾ: ಡೇರಾ ಸಂಘಟನೆ ಮುಖ್ಯಸ್ಥ ರಾಮ್ ರಹೀಂ ಸಿಂಗ್ ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ ಬಳಿಕ ಆತನ ಆಶ್ರಮದಲ್ಲಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಬಾಬಾನ ಸೆಕ್ಸ್ ಕರ್ಮಕಾಂಡ ನಡೆಯುತ್ತಿದ್ದ ಸೀಕ್ರೆಟ್ ಗುಹಾ ಮಾರ್ಗವನ್ನು ಪತ್ತೆ ಹಚ್ಚಲು ಪೊಲೀಸರಿಗೆ ಇದುವರೆಗೆ ಸಾಧ್ಯವಾಗಿಲ್ಲ. ಆದರೆ ಇದನ್ನು ಪತ್ತೆ ಹಚ್ಚುವ ಶ್ರಮದಲ್ಲಿದ್ದ ಪೊಲೀಸರಿಗೆ ಬೆರಗಾಗುವಂತಹ ಸ್ಥಳವೊಂದು ಪತ್ತೆಯಾಗಿದೆ.
ಸ್ವಿಮ್ಮಿಂಗ್ ಪೂಲ್ ನ ಬಳಿ ಡೇರಾ ಬಾಬಾ ತನ್ನ ವಿದೇಶೀ ಭಕ್ತರಿಗಾಗಿ ಅಂಡರ್ ವಾಟರ್ ರೆಸಾರ್ಟ್ ನಿರ್ಮಾಣದಲ್ಲಿ ತೊಡಗಿದ್ದ ಎನ್ನುವುದು ಪತ್ತೆಯಾಗಿದೆ. ಆದರೆ ಇದು ಪೂರ್ತಿಯಾಗುವ ಮೊದಲೇ ಡೇರಾ ಬಾಬಾ ಜೈಲು ಸೇರಿರುವುದರಿಂದ ಕಾಮಗಾರಿ ಅರ್ಧಕ್ಕೆ ನಿಂತ ಸ್ಥಿತಿಯಲ್ಲಿದೆಯಂತೆ.
ಆದರೆ ಈ ನೀರೊಳಗಿನ ರೆಸಾರ್ಟ್ ನಿರ್ಮಾಣದ ಸ್ಥಿತಿ ನೋಡಿದರೆ ಡೇರಾ ಬಾಬಾ ಎಂತಹ ವೈಭವೋಪೇತ ಜೀವನ ನಡೆಸುತ್ತಿದ್ದ ಎಂಬುದು ಸ್ಪಷ್ಟವಾಗುತ್ತದೆ ಎಂದು ಪೊಲೀಸ್ ಮೂಲಗಳು ಹೇಳಿವೆ.