Publish Date: Wed, 20 Sep 2017 (10:05 IST)
Updated Date: Wed, 20 Sep 2017 (10:06 IST)
ನವದೆಹಲಿ: ತನ್ನ ಮೇಲೆಯೇ ಅತ್ಯಾಚಾರ ನಡೆಸಿದ ಮಾದಕ ದ್ರವ್ಯ ವ್ಯಸನಿ, ಅತ್ಯಾಚಾರಿ ಮಗನನ್ನು ಹೆತ್ತ ತಾಯಿಯೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಘಟನೆ ಮುಂಬೈಯ ಭಯಂದರ್ ನಲ್ಲಿ ನಡೆದಿದೆ.
ರಾಮ್ ಚರಣ್ ರಾಂದಾಸ್ ದ್ವಿವೇದಿ (21) ಕೊಲೆಯಾದ ವ್ಯಕ್ತಿ. ಈತ ಮಾದಕ ವ್ಯಸನಿಯಾಗಿದ್ದ ಈತ ತನ್ನ ಹೆತ್ತ ತಾಯಿ ಮತ್ತು ಮಲತಾಯಿ ಸೇರಿದಂತೆ 12 ಕ್ಕಿಂತಲೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದ. ಈತನ ವರ್ತನೆಯಿಂದ ರೋಸಿ ಹೋದ ತಾಯಿ ತನ್ನ ಸ್ನೇಹಿತರಿಗೆ ದುಡ್ಡು ಕೊಟ್ಟು ಮಗನನ್ನೇ ಕೊಲೆ ಮಾಡಿದ್ದಾಳೆ.
ಆ.20 ರಂದು ಟೆಂಪೋದಲ್ಲಿ ನಗರದ ಹೊರ ವಲಯಕ್ಕೆ ಕರೆದುಕೊಂಡು ಹೋಗಿ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಆತನ ಮೃತದೇಹ ಪೊಲೀಸರಿಗೆ ಸಿಕ್ಕಿತ್ತು. ಈ ನಿಟ್ಟಿನಲ್ಲಿ ತನಿಖೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ