Select Your Language

Notifications

webdunia
webdunia
webdunia
webdunia

ತಾಯಿ, ಸಹೋದರನ ಎದುರೇ 11ರ ಬಾಲೆಯ ಮೇಲೆ ಗ್ಯಾಂಗ್‌ರೇಪ್

ತಾಯಿ, ಸಹೋದರನ ಎದುರೇ 11ರ ಬಾಲೆಯ ಮೇಲೆ ಗ್ಯಾಂಗ್‌ರೇಪ್
ಗ್ವಾಲಿಯರ್ , ಸೋಮವಾರ, 4 ಸೆಪ್ಟಂಬರ್ 2017 (13:17 IST)
ತಾಯಿ ಮತ್ತು ಹದಿಹರೆಯದ ಸಹೋದರನನ್ನು ರಿವಾಲ್ವರ್‌ನಿಂದ ಬೆದರಿಸಿ ಒತ್ತೆಯಾಳಾಗಿರಿಸಿಕೊಂಡು ಅವರ ಮುಂದೆ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದೆ.
ಬುಧವಾರ ಬೆಳಿಗ್ಗೆ ನಡೆದ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ತಾಯಿ ಮತ್ತು ಹದಿಹರೆಯದ ಸಹೋದರನೊಂದಿಗೆ ಬಾಲಕಿ ಮನೆಯಲ್ಲಿದ್ದಾಗ ರಾತ್ರಿ 1 ಗಂಟೆ ಸುಮಾರಿಗೆ ಮನೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು, ತಾಯಿ ಮತ್ತು ಸಹೋದರನ ಮೇಲೆ ಗುಂಡು ಹಾರಿಸುವುದಾಗಿ ಬೆದರಿಸಿ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಘುವೀರ್ ಮೀನಾ ತಿಳಿಸಿದ್ದಾರೆ.
 
ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ಝಾನ್ವರ್ ಸಿಂಗ್ ಖಶ್ವಾ ಎಂದು ಗುರುತಿಸಲಾಗಿದ್ದು, ಆತನಿಗೆ ಸಹಕರಿಸಿದ ಇಬ್ಬರು ಆರೋಪಿಗಳು ರಾಜು ಖುಶ್ವಾ ಮತ್ತು ರಮ್ನಿವಾಸ್ ಖುಶ್ವಾ ಎಂದು ಗುರುತಿಸಲಾಗಿದೆ. 
 
ಮೂವರು ಆರೋಪಿಗಳನ್ನು ನಿನ್ನೆ ರಾತ್ರಿ ಬಂಧಿಸಲಾಗಿದ್ದು ವಿಚಾರಣೆ ಮುಂದುವರಿದಿದೆ. ಆರೋಪಿಗಳ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ರಘುವೀರ್ ಮೀನಾ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿ ಅನುಮತಿ ನೀಡಲು ಸುಪ್ರೀಂ ನಕಾರ