Select Your Language

Notifications

webdunia
webdunia
webdunia
webdunia

ಮೆಡಿಕಲ್ ಪರೀಕ್ಷೆ ಪಾಸಾಗದ ಪತ್ನಿಯ ಸುಟ್ಟು ಭಸ್ಮ ಮಾಡಿದ ಪತಿ

ಮೆಡಿಕಲ್ ಪರೀಕ್ಷೆ ಪಾಸಾಗದ ಪತ್ನಿಯ ಸುಟ್ಟು ಭಸ್ಮ ಮಾಡಿದ ಪತಿ
ಹೈದರಾಬಾದ್ , ಮಂಗಳವಾರ, 19 ಸೆಪ್ಟಂಬರ್ 2017 (09:48 IST)
ಹೈದರಾಬಾದ್: ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಲು ವಿಫಲವಾದ ಪತ್ನಿಯನ್ನು ಪತಿಯೇ ಬೆಂಕಿ ಹಚ್ಚಿ ಕೊಂದ ಧಾರುಣ ಘಟನೆ ತೆಲಂಗಾಣ ರಾಜ್ಯದಲ್ಲಿ ನಡೆದಿದೆ. ಹರಿಕಾ ಎಂಬಾಕೆ ಮೃತ ದುರ್ದೈವಿ.

 
ಹರಿಕಾ ಪೋಷಕರು ಇದೀಗ  ಅಳಿಯ ರಿಶಿ ಕುಮಾರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಹರಿಕಾ ಮೆಡಿಕಲ್ ಪ್ರವೇಶ ಪರೀಕ್ಷೆಯಲ್ಲಿ ಅನುತ್ತೀರ್ಣಳಗಾಗಿದ್ದಕ್ಕೆ ಕೋಪಗೊಂಡ ಅಳಿತ ರಿಶಿ ಕುಮಾರ್ ಈ ಕೃತ್ಯವೆಸಗಿದ್ದಾನೆಂದು ಪೋಷಕರು ಆರೋಪಿಸಿದ್ದಾರೆ. ಅಲ್ಲದೆ, ಹರಿಕಾಗೆ ನಿರಂತರವಾಗಿ ರಿಶಿ ಕುಮಾರ್ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಹರಿಕಾ ಪೋಷಕರು ದೂರಿನಲ್ಲಿ ಹೇಳಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ರಿಶಿ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ವಿಚಾರಣೆ ಮುಂದುವರಿದಿದೆ. ಹರಿಕಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕುಮಾರಸ್ವಾಮಿಗೆ ಹೃದಯ ಶಸ್ತ್ರಚಿಕಿತ್ಸೆ