Publish Date: Tue, 19 Sep 2017 (09:35 IST)
Updated Date: Tue, 19 Sep 2017 (09:36 IST)
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಸೆಪ್ಟೆಂಬರ್ 23 ರಂದು ಹೃದಯ ಶಸ್ತ್ರಚಿಕಿತ್ಸೆಗೊಳಗಾಗಲಿದ್ದಾರೆ. ಹೃದಯದ ವಾಲ್ವ್ ಬದಲಾವಣೆ ಚಿಕಿತ್ಸೆಗೊಳಗಾಗಲಿದ್ದಾರೆ.
ಹಿಂದೊಮ್ಮೆ ತಮ್ಮ ಹೃದಯದಲ್ಲಿ ಟಿಶ್ಯು ವಾಲ್ವ್ ಅಳವಡಿಸಲಾಗಿತ್ತು. ಇದೀಗ ಅದರ ಬದಲಾವಣೆಗೆ ಶಸ್ತ್ರಚಿಕಿತ್ಸೆಗೊಳಗಾಗಬೇಕಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಮತ್ತು ವಿದೇಶಿ ವೈದ್ಯರ ಸಲಹೆ ಪಡೆಯಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕೆಲವು ತಿಂಗಳಿನಿಂದ ತಮಗೆ ನಿರಂತರವಾಗಿ ಕೆಮ್ಮಿನ ಸಮಸ್ಯೆಯಿದ್ದು, ಅದರಿಂದಾಗಿಯೇ ಹೃದಯದ ಮೇಲೆ ತೀವ್ರ ಒತ್ತಡ ಬಿದ್ದಿದೆ. ಹೀಗಾಗಿ ವಾಲ್ವ್ ಬದಲಿಸಬೇಕಾಗಿದೆ. ಕೆಲವು ಮಾಧ್ಯಮಗಳಲ್ಲಿ ತಮ್ಮ ಆರೋಗ್ಯದ ಬಗ್ಗೆ ಇಲ್ಲಸಲ್ಲದ ವರದಿ ಪ್ರಸಾರವಾಗುತ್ತಿದೆ. ಇದಕ್ಕೆಲ್ಲಾ ಕಿವಿಗೊಡಬೇಡಿ. ಶಸ್ತ್ರಚಿಕಿತ್ಸೆ ಬಳಿಕ 15 ದಿನ ವಿಶ್ರಾಂತಿ ಪಡೆದು ಮತ್ತೆ ಪಕ್ಷದ ಚಟುವಟಿಕೆಗೆ ಮರಳಲಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.