Select Your Language

Notifications

webdunia
webdunia
webdunia
webdunia

ಹುಟ್ಟಿದ ಆರೇ ನಿಮಿಷಕ್ಕೆ ಆಧಾರ್ ಪಡೆದ ಶಿಶು!

ಹುಟ್ಟಿದ ಆರೇ ನಿಮಿಷಕ್ಕೆ ಆಧಾರ್ ಪಡೆದ ಶಿಶು!
ನವದೆಹಲಿ , ಸೋಮವಾರ, 25 ಸೆಪ್ಟಂಬರ್ 2017 (07:37 IST)
ನವದೆಹಲಿ: ಆಧಾರ್ ಕಾರ್ಡ್ ಮಾಡುವುದೆಂದರೆ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕು, ದಿನಗಟ್ಟಲೆ ಕಾಯಬೇಕು ಎಂದೆಲ್ಲಾ ನೀವು ಅಂದುಕೊಂಡಿರಬಹುದು. ಆದರೆ ಇಲ್ಲೊಂದು ಮಗು ಹುಟ್ಟಿದ ಆರೇ ನಿಮಿಷಕ್ಕೆ ಆಧಾರ್ ಪಡೆದುಕೊಂಡಿದೆ.

 
ಒಸ್ಮಾನಾಬಾದ್ ಎಂಬಲ್ಲಿ ಈ ಘಟನೆ ನಡೆದಿದೆ. ಒಸ್ಮಾನಾಬಾದ್ ಜಿಲ್ಲಾಸ್ಪತ್ರೆಯಲ್ಲಿ ಹುಟ್ಟಿದ ಮಗುವಿಗೆ ಸೂಕ್ತ ದಾಖಲೆಗಳನ್ನು ತಕ್ಷಣವೇ ಒದಗಿಸಿದ ಕಾರಣ ಆರೇ ನಿಮಿಷದಲ್ಲಿ ಆಧಾರ್ ಕಾರ್ಡ್ ಸಿಕ್ಕಿದೆ.

ಆಧಾರ್ ಕಾರ್ಡ್ ನಲ್ಲಿ ಮಗುವಿನ ಹೆಸರನ್ನು ಭಾವನಾ ಸಂತೋಷ್ ಜಾದವ್ ಎಂದು ಬರೆಯಲಾಗಿದೆ.  ಭಾನುವಾರ 12.03 ಕ್ಕೆ ಮಗುವಿನ ಜನನವಾಗಿತ್ತು. 12.09 ಕ್ಕೆ ಮಗುವಿನ ಪೋಷಕರು ಅಂತರ್ಜಾಲದ ಮುಖಾಂತರ ಜನನ ನೋಂದಣಿ ಪತ್ರ ಮತ್ತು ಆಧಾರ್ ಸಂಖ್ಯೆ ಪಡೆದಿದ್ದಾರೆ. ಇದು ನಿಜಕ್ಕೂ ಅಭಿನಂದನೀಯ ಎಂದು ಜಿಲ್ಲಾಡಳಿತ ಹೇಳಿಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸುಷ್ಮಾ ಸ್ವರಾಜ್`ಗೆ ಥ್ಯಾಂಕ್ಸ್ ಹೇಳಿದ ರಾಹುಲ್ ಗಾಂಧಿ