Select Your Language

Notifications

webdunia
webdunia
webdunia
webdunia

ಸುಷ್ಮಾ ಸ್ವರಾಜ್`ಗೆ ಥ್ಯಾಂಕ್ಸ್ ಹೇಳಿದ ರಾಹುಲ್ ಗಾಂಧಿ

ಸುಷ್ಮಾ ಸ್ವರಾಜ್`ಗೆ ಥ್ಯಾಂಕ್ಸ್ ಹೇಳಿದ ರಾಹುಲ್ ಗಾಂಧಿ
ನವದೆಹಲಿ , ಭಾನುವಾರ, 24 ಸೆಪ್ಟಂಬರ್ 2017 (16:13 IST)
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್`ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಧನ್ಯವಾದ ತಿಳಿಸಿದ್ದಾರೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರದ ದೂರದೃಷ್ಟಿ ಫಲವಾಗಿ ಆರಂಭವಾದ ಐಐಎಂ, ಐಐಟಿ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.
 

ಸುಷ್ಮಾ ಜೀ ಥ್ಯಾಂಕ್ಯೂ ಭಾರತದ ಸಾಧನೆಗಳ ಬಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬಣ್ಣಿಸುವ ಸಂದರ್ಭ ಐಐಟಿ ಮತ್ತ ಐಐಎಂ ಸ್ಥಾಪನೆ ಬಗ್ಗೆ ಪ್ರಸ್ತಾಪಿಸುವ ಮೂಲಕ ಕೊನೆಗೂ  ಕಾಂಗ್ರೆಸ್ ಸರ್ಕಾರದ ಉತ್ತಮ ದೃಷ್ಟಿಕೋನ ಮತ್ತು ಪರಂಪರೆಯನ್ನ ಗುರುತಿಸಿದ್ದೀರಿ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ವಿಶ್ವಸಂಸ್ಥೆಯಲ್ಲಿ ನಿನ್ನೆ ಭಾರತದ ಸಾಧನೆ ಬಗ್ಗೆ ಪ್ರಸ್ತಾಪಿಸಿದ್ದ ಸುಷ್ಮಾ ಸ್ವರಾಜ್, ಸ್ವಾತಂತ್ರ್ಯಾನಂತರ ಭಾರತದ ಸಾಧನೆಗಳಲ್ಲಿ ಐಐಎಂ ಮತ್ತು ಐಐಟಿ ಸ್ಥಾಪನೆಗಳೂ ಪ್ರಮುಖವಾಗಿವೆ. ಪಾಕಿಸ್ತಾನ ಉಗ್ರರನ್ನ ಸೃಷ್ಟಿಸುವುದರಲ್ಲಿ ಮಾತ್ರ ಸಾಧನೆ ಕಂಡಿದೆ ಎಂದು ವಾಗ್ದಾಳಿ ನಡೆಸಿದ್ದರು. ಭಾರತ ವಿಶ್ವದಲ್ಲೇ ಮಾಹಿತಿ ತಂತ್ರಜ್ಞಾನದ ಸೂಪರ್ ಪವರ್ ಆಗಿ ಬೆಳೆದಿದೆ. ಪಾಕಿಸ್ತಾನ ಉಗ್ರರನ್ನ ರಫ್ತು ಮಾಡುವ ಕಾರ್ಖಾನೆಯಾಗಿ ಗುರುತಿಸಿಕೊಂಡಿದೆ ಎಂದು ಕಿಡಿ ಕಾರಿದ್ದರು.  

ನಾವು ವಿಶ್ವಕ್ಕೆ ವಿಜ್ಞಾನಿಗಳು, ಸ್ಕಾಲರ್`ಗಳು, ವೈದ್ಯರು, ಎಂಜಿನಿಯರ್`ಗಳು ಪೂರೈಸುತ್ತಿದ್ದೇವೆ. ಐಐಟಿ, ಐಐಎಂ. ಏಮ್ಸ್ ಸ್ಥಾಪಿಸಿದ್ದೇವೆ. ಪಾಕಿಸ್ತಾನ ಉಗ್ರರನ್ನ ಉತ್ಪಾದಿಸುತ್ತಿದೆ. ಉಗ್ರರ ನೆಲೆ ಸೃಷ್ಟಿಸಿದೆ. ಲಷ್ಕರ್ ಇ ತಯಿಬಾ, ಜೈಷ್ ಇ ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್, ಹಕ್ಕಾನಿ ಜಾಲ ಸೃಷ್ಟಿಸಿದೆ ಎಂದು ವಾಗ್ದಾಳಿ ನಡೆಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಕಳ್ಳರ ಪಕ್ಷ ಎಂಬ ನನ್ನ ಹೇಳಿಕೆಗೆ ಈಗಲೂ ಬದ್ಧ: ಕೆ.ಎನ್. ರಾಜಣ್ಣ