Publish Date: Sat, 23 Sep 2017 (17:44 IST)
Updated Date: Sat, 23 Sep 2017 (17:46 IST)
ಕಾನೂನುಖಾತೆ ಸಚಿವ ಟಿ.ಬಿ.ಜಯಚಂದ್ರಗೆ ಜಿಲ್ಲೆಯ ಶಿರಾ ತಾಲೂಕಿನ ಚಿರತಹಳ್ಳಿ ಗ್ರಾಮಸ್ಥರು ಛೀಮಾರಿ ಹಾಕಿದ ಘಟನೆ ವರದಿಯಾಗಿದೆ.
ಸಚಿವ ಟಿ.ಬಿ.ಜಯಚಂದ್ರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಕೇವಲ ವೋಟ್ ಕೇಳುವಾಗ ಮಾತ್ರ ಗ್ರಾಮಕ್ಕೆ ಬರುತ್ತೀರಿ. ನಂತರ ನಮ್ಮನ್ನು ಯಾರು ಕೇಳುವವರೇ ಇಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ಗರೂ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಾಗಿಲ್ಲ. ಯಾವ ಕೆಲಸ ಮಾಡಿದ್ದೀರಿ ಹೇಳಿ ಎಂದು ಗ್ರಾಮಸ್ಥರು ಸಚಿವರನ್ನು ಪ್ರಶ್ನಿಸಿದ್ದಾರೆ. ಗ್ರಾಮಸ್ಥರನ್ನು ಸಂಭಾಳಿಸುವಲ್ಲಿ ಹೈರಾಣಾದ ಸಚಿವ ಜಯಚಂದ್ರ ಗ್ರಾಮದೊಳಗೆ ಹೋಗದೆ ವಾಪಸಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗ್ರಾಮ ಅಭಿವೃದ್ಧಿ ಮಾಡಿದ ನಂತರ ಗ್ರಾಮವನ್ನು ಪ್ರವೇಶಿಸಿ. ಇದೀಗ ನಿಮಗೆ ಗ್ರಾಮ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಸಚಿವರಿಗೆ ಗ್ರಾಮಸ್ಥರು ತಡೆಯೊಡ್ಡಿದ್ದಾರೆ. ಬಂದ ದಾರಿಗೆ ಸುಂಕವಿಲ್ಲವೆನ್ನುವಂತೆ ಕಾನೂನು ಖಾತೆ ಸಚಿವ ಟಿ.ಬಿ. ಜಯಚಂದ್ರ ಮರಳಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.