Publish Date: Sat, 23 Sep 2017 (14:40 IST)
Updated Date: Sat, 23 Sep 2017 (14:42 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಮೀಟರ್ ಇಲ್ಲ. ಉತ್ತರನ ಪೌರುಷ ಇಲ್ಲಿ ಮಾತ್ರ ತೋರಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಹಕಾರಿ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ನಾನು ಮನ್ನಾ ಮಾಡುತ್ತೇನೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನು ಕೇಂದ್ರ ಸರಕಾರದಿಂದ ಮನ್ನಾ ಮಾಡಿಸಿ ಎಂದು ಹೇಳಿದ್ದೆ. ಆದ್ರೆ ಯಡಿಯೂರಪ್ಪ ಅವರ ಪೌರುಷ ಇಲ್ಲಿ ಮಾತ್ರ ಎಂದು ಕಿಡಿಕಾರಿದರು.
ಪ್ರಧಾನಮಂತ್ರಿ ಮೋದಿ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಎದುರು ರಾಜ್ಯದ ರೈತರ ಸಾಲ ಮನ್ನಾ ಮಾಡುವಂತೆ ಬಾಯಿಬಿಡದ ಯಡಿಯೂರಪ್ಪ, ಇಲ್ಲಿ ಮಾತ್ರ ಉತ್ತರನ ಪೌರುಷ ತೋರಿಸಿ ಗುಡುಗುತ್ತಾರೆ ಎಂದು ವ್ಯಂಗ್ಯವಾಡಿದರು.
ಬೈಕ್ ರ್ಯಾಲಿ ಮಾಡಿ ಸಾಮರಸ್ಯವನ್ನು ಹಾಳು ಮಾಡಲು ಯತ್ನಿಸಿದರು. ಆದ್ರೆ ನಾವು ಅವ್ರನ್ನ ಇಲ್ಲಿಯೇ ಬಂಧಿಸಿ ಶಾಂತಿ ಕಾಪಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.