Publish Date: Fri, 22 Sep 2017 (19:47 IST)
Updated Date: Fri, 22 Sep 2017 (19:49 IST)
ಅಕ್ರಮ ಸಕ್ರಮದಿಂದ ಸಾಕಷ್ಟು ಜನರಿಗೆ ಮೋಸ,ಸಮಸ್ಯೆಗಳಾಗುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.
ಹಾರೋಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಜನಪ್ರಿಯತೆ ಗಳಿಸಲು ಅಕ್ರಮ ಸಕ್ರಮಕ್ಕೆ ಮುಂದಾಗಿದ್ದಾರೆ. ಆದರೆ, ಇದರಿಂದ ಸಾಮಾನ್ಯ ಜನತೆಗೆ ತೀವ್ರ ತೊಂದರೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೈತರಿಂದ ಭೂಮಿ ಪಡೆದು ಡಿ ಗ್ರೂಪ್ ನೌಕರರಿಗೆ ಸೈಟ್ ಹಂಚಲು ನಿರ್ಧರಿಸಿದ್ದರು. ಆ ಸಂದರ್ಭದಲ್ಲಿ ಬಹಳಷ್ಟು ಅಕ್ರಮಗಳು ನಡೆದಿವೆ. ಡಿ ಗ್ರೂಪ್ ನೌಕರರ ಜೊತೆ ಇತರರಿಗೂ ಅಕ್ರಮವಾಗಿ ಸೈಟ್ ಹಂಚಲಾಗಿದೆ ಎಂದು ಗುಡುಗಿದರು.
ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ಅಕ್ರಮ ಸಕ್ರಮ ಮಾಡಿದಲ್ಲಿ ತುಂಬಾ ಜನರಿಗೆ ಅನ್ಯಾಯವಾಗಲಿದೆ. ಸಿಎಂ ಸಿದ್ದರಾಮಯ್ಯ ಸರಕಾರ ಕೂಡಲೇ ಅಕ್ರಮ ಸಕ್ರಮ ಹಿಂಪಡೆಯುವುದು ಸೂಕ್ತ ಎಂದು ಜೆಡಿಎಸ್ ವರಿಷ್ಠ, ಎಚ್.ಡಿ.ದೇವೇಗೌಡ ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.