Publish Date: Sat, 23 Sep 2017 (15:08 IST)
Updated Date: Sat, 23 Sep 2017 (15:11 IST)
ದಾವೂದ್ ಇಬ್ರಾಹಿಂ ಜತೆ ಬಿಜೆಪಿ ಮಾಜಿ ಸಚಿವ ಏಕನಾಥ್ ಖಾಡ್ಸೆ ಲಿಂಕ್ ಹೊಂದಿರುವುದು ಇದೀಗ ಸಾಬೀತಾಗಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕಿ ಅಂಜಲಿ ದಮಾನಿಯಾ ಹೇಳಿದ್ದಾರೆ.
ಏಕನಾಥ್ ಖಾಡ್ಸೆ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಲ್ಲದೇ ದಾವುದ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಅಂಜಲಿ ದಮಾನಿಯಾ ಆರೋಪಿಸಿದ್ದರು. ಇದರಿಂದಾಗಿ ಖಾಡ್ಸೆ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದರು.
ನಿನ್ನೆ ರಾತ್ರಿ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಪಾಕಿಸ್ತಾನದಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ಖಾಡ್ಸೆ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವಂತೆ ಒತ್ತಡ ಹೇರಿರುವುದು ಬಹಿರಂಗವಾಗಿದೆ. ಇದರಿಂದ ಮಾಜಿ ಸಚಿವ ಖಾಡ್ಸೆ, ಭೂಗತ ಪಾತಕಿ ದಾವೂದ್‌ನೊಂದಿಗೆ ಸಂಬಂಧ ಹೊಂದಿರುವುದು ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.
ಆಪ್ ನಾಯಕಿ ಅಂಜಲಿ ದಮಾನಿಯಾ ಘಟನೆಯ ಬಗ್ಗೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ದೂರವಾಣಿ ಕರೆಯ ದಾಖಲೆಗಳನ್ನು ನೀಡಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.