Publish Date: Sat, 23 Sep 2017 (16:32 IST)
Updated Date: Sat, 23 Sep 2017 (17:05 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರಿಗೆ ಮೀಟರಿಲ್ಲ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರದ ಮದದಲ್ಲಿರುವ ಸಿಎಂ ಸಿದ್ದರಾಮಯ್ಯಗೆ ತಾನೇನು ಮಾತನಾಡುತ್ತಿದ್ದೇನೆ ಎನ್ನುವ ಅರಿವು ಕೂಡಾ ಇಲ್ಲ. ವಿಪಕ್ಷಗಳ ವಿರುದ್ಧ ತಪ್ಪು ಪದಗಳ ಬಳಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸ್ವಪಕ್ಷೀಯರ ಆರೋಪಗಳನ್ನು ತಡೆದುಕೊಳ್ಳಲು ಸಿಎಂ ಸಿದ್ದರಾಮಯ್ಯಗೆ ಆಗುತ್ತಿಲ್ಲ. ಆದ್ದರಿಂದ ಅವರ ಮನಸ್ಸು ವಿಚಲಿತವಾಗಿದೆ. ವಿಚಲಿತ ಮನಸ್ಸಿನಿಂದಾಗಿ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ತಾನೇನು ಮಾತನಾಡುತ್ತಿದ್ದೇನೆ ಎನ್ನುವ ಅರಿವು ಅವರಿಗಿಲ್ಲ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿರುವವರೆಗೆ ಅವರಿಗೆ ಪ್ರತಿಯೊಬ್ಬರು ಗೌರವ ಕೊಡುತ್ತಾರೆ. ಸಿಎಂ ಸ್ಥಾನ ಹೋದ ಕೂಡಲೇ ಅವರು ಚರಿತ್ರೆಯಿಂದ ಕಣ್ಮರೆಯಾಗುತ್ತಾರೆ ಎಂದು ಗುಡುಗಿದ್ದಾರೆ.
ದೇಶದಲ್ಲಿ ಹಲವಾರು ಸಿಎಂಗಳನ್ನು ನೋಡಿದ್ದೇನೆ. ಆದರೆ, ಇಂತಹ ಬಾಲಿಶ ಹೇಳಿಕೆಗಳನ್ನು ನೀಡುವಂತಹ ಸಿಎಂನನ್ನು ನೋಡಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವ್ಯಂಗ್ಯವಾಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.