Publish Date: Wed, 20 Sep 2017 (10:12 IST)
Updated Date: Wed, 20 Sep 2017 (10:14 IST)
ನವದೆಹಲಿ: ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಡೇರಾ ಸಚ್ ಮುಖ್ಯಸ್ಥ ಬಾಬಾ ರಾಮ್ ರಹೀಂ ಸಿಂಗ್ ಇದೀಗ ಜೈಲಿನಲ್ಲೇ ದಿನಕ್ಕೆ 20 ರೂ. ಸಂಪಾದನೆ ಮಾಡುತ್ತಿದ್ದಾನೆ. ಅದೂ ತರಕಾರಿ ಬೆಳೆಯುವ ಮೂಲಕ.
ಕಠಿಣ ಶಿಕ್ಷೆಗೊಳಗಾಗಿರುವ ಬಾಬಾಗೆ ಜೈಲಿನಲ್ಲಿ ಸಾಮಾನ್ಯ ಖೈದಿಗಳಿಗೆ ನೀಡುವಂತೆ ತೋಟದ ಕೆಲಸ ನೀಡಲಾಗಿದೆ. ಅದರಂತೆ ವೈಭವೋಪೇತ ಜೀವನ ನಡೆಸುತ್ತಿದ್ದ ಬಾಬಾ ಇದೀಗ ಜೈಲಿನ ತೋಟದಲ್ಲಿ ತರಕಾರಿ ಬೆಳೆಯಬೇಕಿದೆ.
ದಿನಕ್ಕೆ 8 ಗಂಟೆ ದುಡಿಯುತ್ತಿರುವ ಬಾಬಾ ಇದಕ್ಕಾಗಿ 20 ರೂ. ಸಂಬಳ ತೆಗೆದುಕೊಳ್ಳುತ್ತಿದ್ದಾನೆ. ಜೈಲಿನಲ್ಲಿ ಮಾನಸಿಕವಾಗಿ ಕುಗ್ಗದಂತೆ ಖೈದಿಗಳಿಗೆ ಬೇರೆ ಬೇರೆ ಕೆಲಸ ನೀಡಲಾಗುತ್ತದೆ. ಅದೇ ರೀತಿ ಬಾಬಾಗೂ ಕೆಲಸ ನೀಡಲಾಗಿದೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ