Publish Date: Tue, 12 Sep 2017 (10:42 IST)
Updated Date: Tue, 12 Sep 2017 (10:46 IST)
ನವದೆಹಲಿ: ಜಗತ್ತಿನಲ್ಲಿ ಎಂತೆಂತಹ ಪ್ರಯೋಗ ಮಾಡುವವರೆಲ್ಲಾ ಇದ್ದಾರೆ ನೋಡಿ. ಈ ಮಾಡೆಲ್ ಗೂ ಅದೇನೋ ಹುಚ್ಚು ಸಾಹಸ ಮಾಡುವ ಆಸೆಯಾಯಿತು. ಅದಕ್ಕೆ ದೇವಸ್ಥಾನದಲ್ಲೇ ಬೆತ್ತಲಾದಳು. ಆ ತಪ್ಪಿಗೆ ಈಗ ಜೈಲು ವಾಸ ಅನುಭವಿಸುವಂತಾಗಿದೆ.
ಬೆಲ್ಜಿಯಂ ಮಾಡೆಲ್ ಮಾರಿಶಾ ಪೊಪೇನ್ ಇಂತಹದ್ದೊಂದು ಪ್ರಯೋಗ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಆಕೆಗೆ ಹುಚ್ಚು ಸಾಹಸ ಮಾಡುವ ಖಯಾಲಿ. ಇದೇ ರೀತಿ ಈಜಿಪ್ಟ್ ನ ಐತಿಹಾಸಿಕ ದೇವಾಲಯವೊಂದಕ್ಕೆ ಹೋಗಿ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾಳೆ.
ಆದರೆ ಹೀಗೆ ಮಾಡುತ್ತಿರುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಕೊನೆಗೆ ಇಬ್ಬರನ್ನೂ ಪೊಲೀಸರು ಕ್ಯಾಮರಾ ಸಮೇತ ಎಳೆದುಕೊಂಡು ಹೋಗಿದ್ದಾರೆ. ಈಗ ಇಬ್ಬರೂ ಕಂಬಿ ಎಣಿಸುತ್ತಿದ್ದಾರೆ. ಅಷ್ಟಾದರೂ ನಾನು ಮಾಡಿದ ತಪ್ಪೇನು? ಫೋಟೋಗ್ರಾಫರ್ ಮತ್ತು ನನ್ನನ್ನು ನಾಯಿ ಎಳೆದುಕೊಂಡ ಹಾಗೆ ಎಳೆದುಕೊಂಡು ಹೋದರು ಎಂದು ಅಲವತ್ತುಗೈದಿದ್ದಾಳೆ ಮಾರಿಶಾ.