Publish Date: Thu, 03 Aug 2017 (14:02 IST)
Updated Date: Thu, 03 Aug 2017 (14:05 IST)
ಗಂಡನಿಗೆ ವಾಟ್ಸಾಪ್ ವಿಡಿಯೋ ಕಾಲ್ ಮಾಡಿ ಲೈವ್`ನಲ್ಲೇ ಮಾಡೆಲ್ ನೇಣಿಗೆ ಶರಣಾಗಿರುವ ಘಟನೆ ಬಾಂಗ್ಲಾದೇಶದ ಢಾಕಾದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಾಡೆಲ್ ಅನ್ನ 22 ವರ್ಷದ ರಿಸಿಲಾ ಬಿಂಟೆ ಎಂದು ಗುರ್ತಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎನ್ನಲಾಗುತ್ತಿದೆ. ಮಗಳ ಭೀಕರ ಸಾವಿನ ದೃಶ್ಯ ಕಂಡು ತಾಯಿ ಮತ್ತು ಕುಟುಂಬಸ್ಥರು ಬಾಗಿಲ ಬಳಿಯೇ ಕುಸಿದು ಬಿದ್ದಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿದ್ದ ಮಗಳನ್ನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ.
ಮಾಡೆಲ್`ಗೆ 4 ವರ್ಷದ ಒಂದು ಹೆಣ್ಣು ಮಗು ಇದೆ. ನಿನ್ನೆ ಬೆಳಗ್ಗೆ ಪತಿಗೆ ವಾಟ್ಸಾಪ್ ಕಾಲ್ ಮಾಡೆಲ್ ಮಾಡೆಲ್ ಲೈವ್`ನಲ್ಲೇ ನೇಣುಬಿಗಿದುಕೊಂಡಿದ್ದಾಳೆ. ವಿಡಿಯೋ ಚಾಟ್ ಬಗ್ಗೆ ಪೊಲಿಸರು ತನಿಖೆ ನಡೆಸುತ್ತಿದ್ದಾರೆ. ಈ ಸಂದರ್ಭ ಮಗು ಅಜ್ಜಿಯ ಮನೆಯಲ್ಲಿತ್ತು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ