Select Your Language

Notifications

webdunia
webdunia
webdunia
webdunia

ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ಬಳಿ ಮನವಿ ಮಾಡಿಕೊಂಡಿದ್ದು ಯಾಕಾಗಿ ಗೊತ್ತೇ?

ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ಬಳಿ ಮನವಿ ಮಾಡಿಕೊಂಡಿದ್ದು ಯಾಕಾಗಿ ಗೊತ್ತೇ?
ನವದೆಹಲಿ , ಗುರುವಾರ, 12 ಜುಲೈ 2018 (12:54 IST)
ನವದೆಹಲಿ : ಮದುವೆಯ ಪಾವಿತ್ರ್ಯತೆ ರಕ್ಷಿಸಲು 157 ವರ್ಷದ ಹಿಂದೆ ಬ್ರಿಟಿಷ್‌ ಸರ್ಕಾರದ ಅವಧಿಯಲ್ಲಿ ಜಾರಿಯಾದ ಕಾನೂನನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಗೆ ಮನವಿಯೊಂದನ್ನು ಮಾಡಿದೆ.


ಯಾವುದೇ ಪುರುಷ ಪರಸ್ತ್ರೀಯೊಂದಿಗೆ ಆಕೆಯ ಪತಿಯ ಅನುಮತಿ ಇಲ್ಲದೇ ಸಂಬಂಧ ಹೊಂದಿದರೆ ಆತನಿಗೆ ಭಾರತೀಯ ದಂಡ ಸಂಹಿತೆ 497ರ ಪ್ರಕಾರ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು. ಮಹಿಳೆಗೆ ಯಾವುದೇ ಶಿಕ್ಷೆಯಾಗುವುದಿಲ್ಲ. ಇದು ಬ್ರಿಟಿಷರ ಕಾಲದಲ್ಲಿ ಜಾರಿಯಾದ ಕಾನೂನಾಗಿದೆ.


ಆದರೆ ವ್ಯಭಿಚಾರ (ಅಕ್ರಮ ಸಂಬಂಧ) ಪ್ರಕರಣಗಳಲ್ಲಿ ಪುರುಷ ಮತ್ತು ಮಹಿಳೆ- ಇಬ್ಬರನ್ನೂ ಸಮಾನ ದೋಷಿಗಳು ಎಂದು ಪರಿಗಣಿಸಬೇಕು ಅಥವಾ ಪುರುಷ/ಮಹಿಳೆಯರ ನಡುವೆ ತಾರತಮ್ಯ ಮಾಡುವ ವ್ಯಭಿಚಾರ ನಿರ್ಬಂಧ ಕಾನೂನನ್ನು ರದ್ದುಗೊಳಿಸಬೇಕು' ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿ, ಈ ಅರ್ಜಿಯನ್ನು ವಜಾ ಮಾಡುವಂತೆ ನ್ಯಾಯಪೀಠಕ್ಕೆ ಕೇಳಿಕೊಂಡಿದೆ. ಹಾಗೇ ಒಂದು ವೇಳೆ ಈ ದಂಡ ಸಂಹಿತೆ ರದ್ದು ಮಾಡಿದರೆ ವಿವಾಹ ಪದ್ಧತಿಯ ಪಾವಿತ್ರ್ಯ ಮತ್ತು ನಂಬಿಕೆಗೆ ಹಾನಿಯಾಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ಬಳಿ ಮನವಿ ಮಾಡಿಕೊಂಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಥಾಯ್ಲೆಂಡ್‌ನ ಗುಹೆಯಲ್ಲಿ ಸಿಲುಕಿದವರನ್ನು ರಕ್ಷಿಸಿದ ವೈದ್ಯನಿಗೆ ಕಾದಿತ್ತು ಬಿಗ್ ಶಾಕ್