ನವದೆಹಲಿ : ತಾಜ್ ಮಹಲ್ ನಲ್ಲಿ ಹೊರಗಿನವರ ನಮಾಜ್ ಗೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಸಾರ್ವಜನಿಕ ಅರ್ಜಿಯ ವಿಚಾರಣೆ ನಡೆಸಿದ  ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ಪ್ರಕಟಿಸಿದೆ.
									
			
			 
 			
 
 			
					
			        							
								
																	
ಜನವರಿ 24, 2018ರಂದು ಆಗ್ರಾದ ಆಡಳಿತಾಧಿಕಾರಿಗಳು ತಾಜ್ ಮಹಲ್ ಬಳಿಯಿರುವ ಮಸೀದಿಯಲ್ಲಿ ಹೊರಗಿನ ಜನರು ನಮಾಜ್ ಮಾಡುವುದನ್ನು ತಡೆದಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅರ್ಜಿಯನ್ನು ವಜಾ ಮಾಡಿ ತಾಜ್ ಮಹಲ್ ವಿಶ್ವದ ಏಳು ಅದ್ಭುತಗಳಲ್ಲಿ ಒಂದು. ನಮಾಜನ್ನು ಬೇರೆ ಮಸೀದಿಗಳಲ್ಲಿ ಕೂಡ ಮಾಡಬಹುದು ಎಂದು ಹೇಳಿದೆ.
									
										
								
																	
ತಾಜ್ ಮಹಲ್ ಪರಿಸರದಲ್ಲಿರುವ ಮಸೀದಿಯಲ್ಲಿ ಪ್ರತಿ ಶುಕ್ರವಾರ ಪ್ರಾರ್ಥನೆ ಮಾಡುವ ಪದ್ಧತಿ ರೂಢಿಯಲ್ಲಿದೆ. ಆದ್ರೆ ಹೊರಗಿನವರಿಗೆ ಪಾರ್ಥನೆಗೆ ಅನುಮತಿಯಿಲ್ಲ. ಇದಾಗ್ಯೂ ತಾಜ್ ಮಹಲ್ ನಲ್ಲಿ ಪಾರ್ಥನೆ ಮಾಡುವುದನ್ನು ಅನೇಕ ಸಂಘಟನೆಗಳು ವಿರೋಧಿಸಿವೆ.
									
											
							                     
							
							
			        							
								
																	
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ