Select Your Language

Notifications

webdunia
webdunia
webdunia
webdunia

ಪುಟಾಣಿಯ ಕೃಷಿಪ್ರೇಮ: ಸಾರ್ವಜನಿಕರಿಂದ ಮೆಚ್ಚುಗೆ

ಪುಟಾಣಿಯ ಕೃಷಿಪ್ರೇಮ: ಸಾರ್ವಜನಿಕರಿಂದ ಮೆಚ್ಚುಗೆ
ಉಡುಪಿ , ಗುರುವಾರ, 5 ಜುಲೈ 2018 (16:54 IST)
ಚಿಕ್ಕಮಕ್ಕಳು ಮನೆಯ ಟಿವಿಯಲ್ಲಿ ಕಾರ್ಟೂನ್ ನೋಡುತ್ತಾ ಮೊಬೈಲ್‍ನಲ್ಲಿ ಗೇಮ್ ಆಡುತ್ತಾ ಕಾಲ ಕಳೆಯುವ ಇಂದಿನ ದಿನಗಳಲ್ಲಿ ಉಡುಪಿಯ ಪುಟ್ಟ ಬಾಲಕನೊಬ್ಬ ಗದ್ದೆಗಿಳಿದ್ದಾನೆ. ಬಾಲಕನ ಈ ಕೃಷಿಯ ಒಲುಮೆ ಕಂಡು ಬಂದಿದ್ದು, ಉಡುಪಿಯ ಕೊಡವೂರು ಗ್ರಾಮದಲ್ಲಿ.

ಬಾಲಕನ ಹೆಸರು ರಿತ್ವಿಕ್. ಮಲ್ಪೆಯ ಖಾಸಗಿ ಶಾಲೆಯಲ್ಲಿ 2ನೇ ತರಗತಿಯ ವಿದ್ಯಾರ್ಥಿ. ಗಣೇಶ್ ಹಾಗೂ ಪುಷ್ಪ ದಂಪತಿಯ ಪುತ್ರ ರಿತ್ವಿಕ್‍ಗೆ ಬಾಲ್ಯದಿಂದಲೇ ಕೃಷಿ ಚಟುವಟಿಕೆ ಮೇಲೆ ಹೆಚ್ಚಿನ ಆಸಕ್ತಿ. ಹಿರಿಯರು ಗದ್ದೆಗಿಳಿದು ಉಳುಮೆ ಮಾಡ್ತಿದ್ರೆ, ಅವರ ಜೊತೆ ಈತನೂ ಉಳುಮೆ ಮಾಡ್ತಾನೆ. ಅಷ್ಟೇ ಅಲ್ಲದೇ ಬಲಶಾಲಿ ಕೋಣಗಳನ್ನು ಪಳಗಿಸುವುದಕ್ಕೂ ಈತ ಮುಂದಾಗ್ತಾನೆ.

ಅಂದ ಹಾಗೆ ಭಾನುವಾರದ ರಜಾದಿನದಂದು ರಿತ್ವಿಕ್ ತಮ್ಮ ಹೊಲದಲ್ಲಿ ಉಳುಮೆ ಮಾಡಿದ ವಿಡಿಯೋವೊಂದು ಇದೀಗ ಸಾಕಷ್ಟು ವೈರಲ್ ಆಗ್ತಾ ಇದೆ, ಪುಟಾಣಿಯ ಕೃಷಿಪ್ರೇಮಕ್ಕೆ ಸಾರ್ವಜನಿಕರಿಂದಲು ಮೆಚ್ಚುಗೆ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ನ್ಯಾಯವಾದಿ ಶಾಂತಾರಾಮ್ ಶೆಟ್ಟಿ ಮುಂದುವರಿಕೆ