Select Your Language

Notifications

webdunia
webdunia
webdunia
webdunia

ಬುದ್ದಿಜೀವಿಗಳ ವಿರುದ್ದ ಕೇಂದ್ರ ಸಚಿವ ಅನಂತಕುಮಾರ್ ಕಿಡಿ

ಬುದ್ದಿಜೀವಿಗಳ ವಿರುದ್ದ ಕೇಂದ್ರ ಸಚಿವ ಅನಂತಕುಮಾರ್ ಕಿಡಿ
ಧಾರವಾಡ , ಗುರುವಾರ, 5 ಜುಲೈ 2018 (16:27 IST)
ಬುದ್ದಿಜೀವಿಗಳ ವಿರುದ್ದ ಕೇಂದ್ರ ಸಚಿವ ಅನಂತಕುಮಾರ್ ಮತ್ತೊಮ್ಮೆ ಕಿಡಿಕಾರಿದ್ದಾರೆ. ಇಂದು ಧಾರವಾಡ ನಗರದ ಸೃಜನಾ ರಂಗಮಂದಿರಲ್ಲಿ ಆಯೋಜಿಸಿದ್ದ ಸ್ಕಿಲಾಥಾನ್ ಕಾರ್ಯಕ್ರಮದ ಭಾಷಣದಲ್ಲಿ ಮಾತನಾಡಿದ ಅವರು, ಬುದ್ದಿ ಜೀವಗಳ ಪ್ರಕಾರ ಜೀವನವೆಂದರೆ ಶರೀರಕ್ಕೆ ಬೇಕಾದ ಅವಶ್ಯಕತೆಗಳು.

ಸೋ ಕಾಲ್ಡ್ ಬುದ್ದಿಜೀವಿಗಳಿಗೆ ಜೀವನದ 360 ಡಿಗ್ರಿಯ ಅರಿವು ಇಲ್ಲ. ಶರೀರಕ್ಕೆ ಬೇಕಾದ ಅಗತ್ಯತೆಗಳನ್ನೆ ಅವರು ಜೀವನ ಎಂದುಕೊಂಡಿದ್ದಾರೆ. ವ್ಯಕ್ತಿಯೊಬ್ಬನ  ಬಳಿ ಅಂತರಾತ್ಮ ಅನ್ನೋದು ಇರುತ್ತದೆ. ಆದರೆ, ಬುದ್ದಿಜೀವಿಗಳ ಡಿಕ್ಷನರಿಯಲ್ಲಿ ಅಂತರಾತ್ಮ ಅನ್ನೋದೆ ಇರುವುದಿಲ್ಲ ಎಂದು ಕುಟುಕಿದರು.

ಮನಸ್ಸಿಗೆ ತೃಪ್ತಿ ಅನ್ನೋದು ಸಿಕ್ಕಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದ ಅನಂತಕುಮಾರ್ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ದಿಸಿಕೊಳ್ಳುವಂತೆ ಕರೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅತಿರುದ್ರ ಮಹಾಯಾಗ ನಡೆಸಿದ ಸಚಿವ ಡಿಕೆಶಿ