Publish Date: Sun, 01 Jul 2018 (17:05 IST)
Updated Date: Sun, 01 Jul 2018 (17:10 IST)
ಶಾಸಕ ಶಿವರಾಮ ಹೆಬ್ಬಾರ ವಿರುದ್ಧ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಗರಂ ಆಗಿದ್ದು, ವಿವಾದಿತ ಹೇಳಿಕೆ ನೀಡಿದ್ದಾರೆ.
ನಿಮ್ಮ ಶಾಸಕ ಸತ್ತು ಹೋದ್ರಾ ಎಂದು ಕೇಂದ್ರ ಸಚಿವ ಅನಂತಕುಮಾರ ಕೇಳಿದ್ದಾರೆ.
ಶಿರಸಿ ತಾಲೂಕಿನ ಬನವಾಸಿಯಲ್ಲಿ ಆಯೋಜಿಸಿದ್ದ ಅರಣ್ಯ ಇಲಾಖೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಅವರು ಮಹಿಳೆಯೊಬ್ಬರ ಸಮಸ್ಯೆ ಆಲಿಸಿದರು. ವರ್ಷಗಳಿಂದ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರಿಲ್ಲ. ತಕ್ಷಣ ನೇಮಕ ಮಾಡಲು ಕ್ರಮ ಕೈಗೊಳ್ಳುವಂತೆ ಮಹಿಳೆ ಮನವಿ ಮಾಡಿದರು. ಇದೇ ವೇಳೆ ಶಾಸಕ ಹೆಬ್ಬಾರ ಮೇಲಿನ ಕೋಪವನ್ನು ಹೊರ ಹಾಕಿದ ಅನಂತಕುಮಾರ ಹೆಗಡೆ, ನನ್ನ ವ್ಯಾಪ್ತಿಗೆ ವೈದ್ಯರ ನೇಮಕ ವಿಷಯ ಬರುವುದಿಲ್ಲ. ಅದು ರಾಜ್ಯ ಸರಕಾರದ ವ್ಯಾಪ್ತಿಗೆ ಸೇರಿದ್ದು. ನಿಮ್ಮ ಶಾಸಕರೇನು ಸತ್ತು ಹೋಗಿದ್ದಾರಾ? ಎಂದು ಮಹಿಳೆಯನ್ನು ಪ್ರಶ್ನಿಸಿದರು.
ಕದಂಬ ಗಿಡ ನೆಟ್ಟು ಸ್ಥಳೀಯ ಶಾಸಕರ ಮೇಲೆ ಕೇಂದ್ರ ಸಚಿವ ರೇಗಿದ್ದು ಕಾರ್ಯಕರ್ತರಲ್ಲಿ ಅಸಮಧಾನಕ್ಕೆ ಕಾರಣವಾಗುತ್ತಿದೆ.