Select Your Language

Notifications

webdunia
webdunia
webdunia
webdunia

‘ನಾಯಿ ಸತ್ತರೂ ಪ್ರಧಾನಿ ಪ್ರತಿಕ್ರಿಯಿಸಬೇಕೇ?’ ಗೌರಿ ಹತ್ಯೆ ಬಗ್ಗೆ ಪ್ರಮೋದ್ ಮುತಾಲಿಕ್ ವಿವಾದಿತ ಹೇಳಿಕೆ

‘ನಾಯಿ ಸತ್ತರೂ ಪ್ರಧಾನಿ ಪ್ರತಿಕ್ರಿಯಿಸಬೇಕೇ?’ ಗೌರಿ ಹತ್ಯೆ ಬಗ್ಗೆ ಪ್ರಮೋದ್ ಮುತಾಲಿಕ್ ವಿವಾದಿತ ಹೇಳಿಕೆ
ಬೆಂಗಳೂರು , ಸೋಮವಾರ, 18 ಜೂನ್ 2018 (11:10 IST)
ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಸಂಚಾಲಕ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಗೌರಿ ಲಂಕೇಶ್ ಹತ್ಯೆ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಟೀಕಿಸುತ್ತಿರುವವರಿಗೆ ತಿರುಗೇಟು ನೀಡುವಾಗ ಪ್ರಮೋದ್ ಮುತಾಲಿಕ್ ‘ಕರ್ನಾಟಕದಲ್ಲಿ ಯಾವುದೋ ಒಂದು ನಾಯಿ ಸತ್ತರೆ ಪ್ರಧಾನಿ ಯಾಕ ಪ್ರತಿಕ್ರಿಯಿಸಬೇಕು?’ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲೇ ಪ್ರಮೋದ್ ಮುತಾಲಿಕ್ ಈ ಹೇಳಿಕೆ ನೀಡಿದ್ದಾರೆ. ಗೌರಿ ಲಂಕೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಪರಶುರಾಮ್ ವಾಗ್ಮೋರೆ ಎಂಬಾತನನ್ನು ಬಂಧಿಸಿದ್ದು, ಶ್ರೀರಾಮ ಸೇನೆ ವಿಜಯಪುರ ಘಟಕ ನಾಯಕ ರಾಕೇಶ್ ಮಠ ಎಂಬವರಿಗೆ ವಿಚಾರಣೆಗೆ ಹಾಜರಾಗಲು ಎಸ್ ಐಟಿ ಸಮನ್ಸ್ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಾಯಕರ ಸಮಸ್ಯೆಯನ್ನು ಅವರೇ ಬಗೆಹರಿಸಿಕೊಳ್ತಾರೆ: ಸಿಎಂ ಎಚ್ ಡಿಕೆ