Publish Date: Sat, 26 May 2018 (12:45 IST)
Updated Date: Sat, 26 May 2018 (12:47 IST)
ಮುಂಬೈ: ಕ್ರಾಂತಿಕಾರಿ ದೊರೆ ಛತ್ರಪತಿ ಶಿವಾಜಿ ಫೋಟೋಗೆ ಮಾಲಾರ್ಪಣೆ ಮಾಡುವಾಗ ಚಪ್ಪಲಿ ತೆಗೆಯದ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಕಿಡಿ ಕಾರಿದ್ದಾರೆ.
‘ಸಿಎಂ ಯೋಗಿ ಚಪ್ಪಲಿ ಹಾಕಿಕೊಂಡೇ ಶಿವಾಜಿ ಮಹಾರಾಜ್ ಫೋಟೋಗೆ ಮಾಲಾರ್ಪಣೆ ಮಾಡಿದರು. ನನಗೆ ಅದೇ ಚಪ್ಪಲಿ ಕೈಗೆ ತೆಗೆದುಕೊಂಡು ಅವರಿಗೆ ಹೊಡೆಯಬೇಕು ಎನಿಸಿತು’ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ ಪತ್ರಿಕೆಯಲ್ಲಿ ಬರೆದುಕೊಂಡಿದ್ದಾರೆ.
ಬಿಜೆಪಿ ಬಗ್ಗೆಯೂ ಕಿಡಿ ಕಾರಿರುವ ಉದ್ಧವ್ ಠಾಕ್ರೆ, ಬಿಜೆಪಿ ಈಗ ತನ್ನ ದಾರಿಗೆ ಅಡ್ಡ ಬರುವ ಯಾರನ್ನೇ ಆದರೂ ಕೊಚ್ಚಿ ಹಾಕುವ ವಿಕೃತ ಕೊಲೆಗಾರನಂತಾಗಿದೆ ಎಂದು ಟೀಕಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.