Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ನೆರವಿಗೆ ಬಂದ ಕೇಂದ್ರ ಸಚಿವ

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ನೆರವಿಗೆ ಬಂದ ಕೇಂದ್ರ ಸಚಿವ
ನವದೆಹಲಿ , ಮಂಗಳವಾರ, 19 ಜೂನ್ 2018 (09:23 IST)
ನವದೆಹಲಿ: ರಸ್ತೆಯಲ್ಲಿ ಪ್ಲಾಸ್ಟಿಕ್ ಎಸೆದವರಿಗೆ ಬುದ್ಧಿ ಹೇಳಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಒಳಗಾದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ನೆರವಿಗೆ ಕೇಂದ್ರ ಸಚಿವ ಕಿರೆನ್ ರಿಜಿಜು ಧಾವಿಸಿದ್ದಾರೆ.

ಈ ವಿಡಿಯೋದಲ್ಲಿ ಕೆಲವರು ಅನುಷ್ಕಾ ಸೀಟ್ ಬೆಲ್ಟ್ ತೊಟ್ಟಿರಲಿಲ್ಲ ಎಂದು ತಕರಾರು ತೆಗೆದಿದ್ದರೆ ಇನ್ನು ಕೆಲವರು ವಿರಾಟ್ ಮತ್ತು ಅನುಷ್ಕಾ ಪಬ್ಲಿಸಿಟಿಗಾಗಿ ಇಷ್ಟೆಲ್ಲಾ ಮಾಡಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಸ್ಟಾರ್ ದಂಪತಿ ಪರವಾಗಿ ಮಾತನಾಡಿರುವ ಕೇಂದ್ರ ಸಚಿವ ಕಿರೆನ್ ಅವರಿಬ್ಬರೂ ಪ್ರೈವೆಸಿ ಬಯಸುತ್ತಾರೆ, ಪಬ್ಲಿಸಿಟಿ ಅಲ್ಲ ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು ‘ನಾಗರಿಕತೆ ಎನ್ನುವುದು ನಮ್ಮ ನಡೆ, ನುಡಿಯಲ್ಲಿರಬೇಕು. ಅದು ಶಿಕ್ಷಣ ಅಥವಾ ಶ್ರೀಮಂತಿಕೆಯಿಂದ ಬರಲ್ಲ. ಭಾರತವನ್ನು ಸ್ವಚ್ಛವಾಗಿಡೋಣ’ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯಾರ ಕಣ್ಣಿಗೂ ಬೀಳದೆ ಅಭ್ಯಾಸ ಮಾಡಿದ ಧೋನಿ