Select Your Language

Notifications

webdunia
webdunia
webdunia
webdunia

ಯಾರ ಕಣ್ಣಿಗೂ ಬೀಳದೆ ಅಭ್ಯಾಸ ಮಾಡಿದ ಧೋನಿ

ಯಾರ ಕಣ್ಣಿಗೂ ಬೀಳದೆ ಅಭ್ಯಾಸ ಮಾಡಿದ ಧೋನಿ
ಬೆಂಗಳೂರು , ಮಂಗಳವಾರ, 19 ಜೂನ್ 2018 (09:21 IST)
ಬೆಂಗಳೂರು: ಯೋ ಯೋ ಫಿಟ್ನೆಸ್ ಟೆಸ್ಟ್ ನಲ್ಲಿ ಪಾಸಾಗಿ ಮುಂಬರುವ ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗಿರುವ ಕ್ರಿಕೆಟಿಗ ಧೋನಿ ಅಭಿಮಾನಿಗಳ ಕಣ್ಣಿಗೆ ಕಾಣದಂತೆ ಬೆಂಗಳೂರಿನ ಎನ್ ಸಿಎಯಲ್ಲಿ ಪ್ರಾಕ್ಟೀಸ್ ಆರಂಭಿಸಿದ್ದಾರೆ.

ಫಿಟ್ನೆಸ್ ಟೆಸ್ಟ್ ಗಾಗಿ ಬೆಂಗಳೂರಿಗೆ ಬಂದಿರುವ ಧೋನಿ ಎನ್ ಸಿಎಯ ನೆಟ್ಸ್ ನಲ್ಲಿ ಸಾರ್ವಜನಿಕರ ಕಣ್ಣಿಗೆ ಕಾಣದಂತೆ, ಯಾರೂ ತನಗೆ ತೊಂದರೆ ಕೊಡದಂತೆ ಗಂಭೀರವಾಗಿ ಅಭ್ಯಾಸದಲ್ಲಿ ತೊಡಗಿಸಿಕೊಂಡು ಗಮನ ಸೆಳೆದರು.

ನೂರಾರು ಎಸೆತಗಳನ್ನು ಎದುರಿಸಿದ ಧೋನಿ ತಮ್ಮ ಬ್ಯಾಟಿಂಗ್ ಕಡೆಗೆ ಹೆಚ್ಚಿನ ಗಮನ ಕೊಟ್ಟಿದ್ದು ಗಮನ ಸೆಳೆಯುವಂತಿತ್ತು. ಸುಮಾರು ಎರಡರಿಂದ ಎರಡೂವರೆ ಗಂಟೆಗಳ ಕಾಲ ಸ್ಥಳೀಯ ಬೌಲರ್ ಗಳ ಸಹಾಯದಿಂದ ಧೋನಿ ಕಠಿಣ ತಾಲೀಮು ನಡೆಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ಬಳಿಕ ಮತ್ತೊಂದು ಕ್ರಿಕೆಟ್ ತಂಡ ಬಾಲ್ ವಿರೂಪ ಪ್ರಕರಣದಲ್ಲಿ?!