Publish Date: Mon, 18 Jun 2018 (10:14 IST)
Updated Date: Mon, 18 Jun 2018 (10:16 IST)
ಕೊಲೊಂಬೊ: ಚೆಂಡು ವಿರೂಪ ಪ್ರಕರಣ ಆಸ್ಟ್ರೇಲಿಯಾ ಕ್ರಿಕೆಟ್ ನ್ನು ವಿಶ್ವ ಮಟ್ಟದಲ್ಲಿ ಮುಜುಗರಕ್ಕೀಡು ಮಾಡಿತ್ತು. ಇದೀಗ ಮತ್ತೊಂದು ಅಂತಾರಾಷ್ಟ್ರೀಯ ಕ್ರಿಕೆಟ್ ತಂಡ ಈ ವಿವಾದದಲ್ಲಿ ಸಿಲುಕಿದೆ.
ವೆಸ್ಟ್ ಇಂಡೀಸ್ ವಿರುದ್ಧ ಸೇಂಟ್ ಲೂಸಿಯಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಿನೇಶ್ ಚಂಡಿಮಾಲ್ ಬಾಲ್ ವಿರೂಪಗೊಳಿಸಲು ಸಿಹಿ ಪದಾರ್ಥ ಬಳಸಿದ್ದರು ಎಂದು ಆರೋಪಿಸಲಾಗಿದೆ. ಈ ದೃಶ್ಯ ಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು.
ಆದರೆ ಐಸಿಸಿ ಬಳಿ ದಿನೇಶ್ ತಮ್ಮ ಮೇಲೆ ಬಂದಿರುವ ಆರೋಪ ನಿರಾಕರಿಸಿದ್ದಾರೆ. ಇದೀಗ ಮ್ಯಾಚ್ ರೆಫರಿ, ಕನ್ನಡಿಗ ಜಾವಗಲ್ ಶ್ರೀನಾಥ್ ನೇತೃತ್ವದ ಐಸಿಸಿ ಸಮಿತಿ ಪ್ರಕರಣದ ತನಿಖೆ ನಡೆಸಲಿದೆ. ಈಗಾಗಲೇ ಸೋತು ಸೊರಗಿರುವ ಲಂಕಾ ತಂಡಕ್ಕೆ ಇದು ಮತ್ತೊಂದು ಕಪ್ಪು ಚುಕ್ಕೆಯಾಗುವ ಲಕ್ಷಣ ಕಾಣುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.