ಮುಂಬೈ: ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಟಾಸ್ ಹಾಕುವ ಪದ್ಧತಿ ಅನಗತ್ಯ. ಇದು ಅತಿಥೇಯ ತಂಡಕ್ಕೆ ಅನುಕೂಲ ಮಾಡಿಕೊಡುತ್ತದೆ ಎಂಬ ವಾದ ಎದ್ದಿತ್ತು. ಆದರೆ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಸಮಿತಿ ಇದನ್ನು ತಳ್ಳಿ ಹಾಕಿದೆ.
ಮುಂಬೈನಲ್ಲಿ ಎರಡು ದಿನಗಳ ಕಾಲ ನಡೆದ ಐಸಿಸಿ ಕ್ರಿಕೆಟ್ ಸಮಿತಿ ಸಭೆಯಲ್ಲಿ ಅನಿಲ್ ಕುಂಬ್ಳೆ ನೇತೃತ್ವದ ಸಮಿತಿ ಟೆಸ್ಟ್ ಕ್ರಿಕೆಟ್ ನಿಂದ ಟಾಸ್ ರದ್ದುಗೊಳಿಸದೇ ಇರಲು ತೀರ್ಮಾನಿಸಿದೆ. ಇದು ಟೆಸ್ಟ್ ಕ್ರಿಕೆಟ್ ನ ಅವಿಭಾಜ್ಯ ಭಾಗ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಇದೇ ವೇಳೆ ಮೈದಾನದಲ್ಲಿ ಆಟಗಾರರ ಹದ್ದು ಮೀರಿದ ವರ್ತನೆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಬಾಲ್ ವಿರೂಪಗೊಳಿಸುವಂತಹ ಕೆಲಸ ಮಾಡುವ ಆಟಗಾರರಿಗೆ ಕಠಿಣ ಶಿಕ್ಷೆ ನೀಡಲು ಕ್ರಿಕೆಟ್ ಸಮಿತಿ ಸಲಹೆ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.