Select Your Language

Notifications

webdunia
webdunia
webdunia
webdunia

ಫಿಫಾ ವಿಶ್ವಕಪ್: ಬಾಲಕನ ಕೋರಿಕೆ ಈಡೇರಿಸಲು ಫುಟ್ಬಾಲ್ ದೊರೆ ರೊನಾಲ್ಡೊ ಮಾಡಿದ್ದೇನು?

ಫಿಫಾ ವಿಶ್ವಕಪ್: ಬಾಲಕನ ಕೋರಿಕೆ ಈಡೇರಿಸಲು ಫುಟ್ಬಾಲ್ ದೊರೆ ರೊನಾಲ್ಡೊ ಮಾಡಿದ್ದೇನು?
ನವದೆಹಲಿ , ಸೋಮವಾರ, 18 ಜೂನ್ 2018 (10:02 IST)
ನವದೆಹಲಿ: ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್ ವಿಶ್ವಕಪ್ ಹಲವು ವಿಶೇಷ ವಿದ್ಯಮಾನಗಳಿಗೆ ಕಾರಣವಾಗಿದೆ. ಅಭಿಮಾನಿ ಬಾಲಕನೊಬ್ಬನ ಕೋರಿಕೆ ಈಡೇರಿಸಲು ಫುಟ್ಬಾಲಿಗ ಕ್ರಿಸ್ಟಿಯಾನಾ ರೊನಾಲ್ಟೋ ಮಾಡಿದ್ದೇನು ಗೊತ್ತಾ?

ಪೋರ್ಚುಗಲ್ ತಂಡದ ಸ್ಟಾರ್ ಆಟಗಾರ ರೊನಾಲ್ಡೋಗೆ ವಿಶ್ವದಾದ್ಯಂತ ಹಲವಾರು ಅಭಿಮಾನಿಗಳಿದ್ದಾರೆ. ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ತಮ್ಮ ತಂಡದ ಆಟ ಮುಗಿಸಿ ರೊನಾಲ್ಡೋ ಬಸ್ ಏರಿ ತಂಡದ ಸಹ ಆಟಗಾರರ ಜತೆ ತೆರಳುವ ವೇಳೆ ಬಾಲಕನೊಬ್ಬ ತನ್ನ ಆರಾಧ್ಯ ದೈವ ರೊನಾಲ್ಡೋ ನೋಡಬೇಕೆಂದು ಹಠ ಹಿಡಿಯುತ್ತಿದ್ದ.

ಆದರೆ ಅಷ್ಟರಲ್ಲಾಗಲೇ ರೊನಾಲ್ಡೋ ಬಸ್ ಏರಿ ಆಗಿತ್ತು. ಹೀಗಾಗಿ ಭದ್ರತಾ ಅಧಿಕಾರಿ ಆ ಪುಟ್ಟ ಬಾಲಕನನ್ನು ರೊನಾಲ್ಡೋ ಬಳಿ ತೆರಳಲು ಬಿಡಲಿಲ್ಲ. ಹೀಗಾಗಿ ಆತ ಜೋರಾಗಿ ಅಳುತ್ತಿದ್ದ. ಆತನ ಅಳುವಿನ ಸದ್ದು ಕೇಳಿ ಬಸ್ ಗೆ ಹತ್ತಿದ್ದ ರೊನಾಲ್ಡೋ ಮರಳಿ ಕೆಳಗೆ ಇಳಿದು ಬಂದು ಬಾಲಕನನ್ನು ಸಂತೈಸಿದ್ದಲ್ಲದೆ, ಹಣೆಗೆ ಮುತ್ತಿಟ್ಟು ಒಂದು ಫೋಟೋವನ್ನು ತೆಗೆಸಿಕೊಂಡು ಕೋರಿಕೆ ಈಡೇರಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪಂದಿರ ದಿನಕ್ಕೆ ಧೋನಿಗೆ ವಿಶೇಷ ಗೌರವ ಕೊಟ್ಟ ಸಿಎಸ್ ಕೆ