Select Your Language

Notifications

webdunia
webdunia
webdunia
webdunia

ವ್ಯಕ್ತಿಯೊಬ್ಬನ ಮೇಲೆ ನಟಿ ಅನುಷ್ಕಾ ಶರ್ಮಾ ಯಾಕೆ ಗರಂ ಆಗಿದ್ದು

ವ್ಯಕ್ತಿಯೊಬ್ಬನ ಮೇಲೆ ನಟಿ ಅನುಷ್ಕಾ ಶರ್ಮಾ ಯಾಕೆ ಗರಂ ಆಗಿದ್ದು
ಮುಂಬೈ , ಸೋಮವಾರ, 18 ಜೂನ್ 2018 (13:03 IST)
ಮುಂಬೈ : ಕಾರಿನಲ್ಲಿ ಪ್ರಯಾಣಿಸುತ್ತಾ ರಸ್ತೆಯ ಮೇಲೆ ಕಸ ಎಸೆದ ವ್ಯಕ್ತಿಯೊಬ್ಬರನ್ನು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.


ನಟಿ ಅನುಷ್ಕಾ ಶರ್ಮಾ ಅವರು ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ  ವ್ಯಕ್ತಿಯೊಬ್ಬ ಕಾರಿನಿಂದ ಹೊರಗೆ ಕಸ ಎಸೆಯುತ್ತಿರುವುದನ್ನು ನೋಡಿ ಕೋಪಗೊಂಡು ತಮ್ಮ ಕಾರಿನ ಗಾಜು ಇಳಿಸಿ, 'ರಸ್ತೆಯ ಮೇಲೇಕೆ ಕಸ ಬಿಸಾಡುತ್ತಿದ್ದೀರಿ? ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಪ್ಲಾಸ್ಟಿಕ್‌ ಎಸೆಯುವಂತಿಲ್ಲ. ದಯವಿಟ್ಟು ಕಾಳಜಿ ವಹಿಸಿ’ ಎಂದು ಗರಂ ಆಗಿ ಹೇಳಿದ್ದಾರೆ.


ಈ ಸನ್ನಿವೇಶವನ್ನು ವಿಡಿಯೋ ಮಾಡಿದ ಅವರ ಪತಿ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ 'ರಸ್ತೆಯಲ್ಲಿ ಈ ರೀತಿ ಕಸ ಹಾಕುವ ಜನರನ್ನು ಸರಿದಾರಿಗೆ ತರಬೇಕಿದೆ. ಐಷಾರಾಮಿ ಕಾರಿನಲ್ಲಿ ಹೋಗುತ್ತಿದ್ದರೂ ಸ್ವಚ್ಛತೆ ಬಗ್ಗೆ ತಲೆಯಲ್ಲಿ ತಿಳಿವಳಿಕೆ ಇಲ್ಲ. ಇಂತಹ ಸನ್ನಿವೇಶಗಳನ್ನು ನೀವೂ ಕಂಡರೇ, ಜನರನ್ನು ಎಚ್ಚರಿಸಿ ಸ್ವಚ್ಛತೆಯ ಅರಿವು ಮೂಡಿಸಿ' ಎಂದು ಸಲಹೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮುಖ್ಯಮಂತ್ರಿಯಾಗಲು ನಿರ್ಧಾರ ಮಾಡಿದ ಕಿಚ್ಚ ಸುದೀಪ್