Select Your Language

Notifications

webdunia
webdunia
webdunia
webdunia

ಮುಖ್ಯಮಂತ್ರಿಯಾಗಲು ನಿರ್ಧಾರ ಮಾಡಿದ ಕಿಚ್ಚ ಸುದೀಪ್

ಮುಖ್ಯಮಂತ್ರಿಯಾಗಲು ನಿರ್ಧಾರ ಮಾಡಿದ ಕಿಚ್ಚ ಸುದೀಪ್
ಬೆಂಗಳೂರು , ಸೋಮವಾರ, 18 ಜೂನ್ 2018 (13:00 IST)
ಬೆಂಗಳೂರು : ಕನ್ನಡ ನಿರ್ಮಾಪಕರೆಲ್ಲಾ ಸೇರಿಕೊಂಡು  ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರನ್ನು ಮುಖ್ಯಮಂತ್ರಿ ಮಾಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ನಟ ಸುದೀಪ್ ಅವರು ಮುಖ್ಯಮಂತ್ರಿಯಾದರೆ ಈಗಾಗಲೇ ಮುಖ್ಯಮಂತ್ರಿ ಪಟ್ಟ ಅಲಂಕರಿಸಿರುವ ಕುಮಾರಸ್ವಾಮಿ ಅವರು ಏನಾದರೂ ಎಂದು ಚಿಂತಿಸಬೇಡಿ. ಯಾಕೆಂದರೆ ಸುದೀಪ್ ಅವರು ಮುಖ್ಯಮಂತ್ರಿಯಾಗಲಿರುವುದು ಸಿನಿಮಾದಲ್ಲಿ. ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸೂಪರ್ ಹಿಟ್ `ಭರತ್ ಆನೇ ನೇನು' ಸಿನಿಮಾ ಕನ್ನಡಕ್ಕೆ ರಿಮೇಕ್ ಆಗೋಕೆ ರೆಡಿಯಾಗಿದೆ. ‘ಭರತ್ ಆನೇ ನೇನು' ಸಿನಿಮಾದಲ್ಲಿ ಮಹೇಶ್‍ಬಾಬು ಅವರು ಸಿಎಂ ಪಟ್ಟವನ್ನು ಅಲಂಕರಿಸಿ ಸಮಾಜದ ಇಡೀ ವ್ಯವಸ್ಥೆಯನ್ನ ಬದಲಾವಣೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಈ ಪಾತ್ರವನ್ನುಕನ್ನಡದಲ್ಲಿ ಸುದೀಪ್ ಅವರು ಮಾಡಲಿದ್ದಾರಂತೆ. ಇದಕ್ಕೆ ಹಲವು ನಿರ್ಮಾಪಕರು ಮುಂದಾಗಿದ್ದು ‘ಭರತ್ ಅನ್ನೋ ನಾನು' ಟೈಟಲ್ ಇಡೋಕೆ ಕೂಡ ಅವರು ನಿರ್ಧರಿಸಿದ್ದಾರಂತೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಶಿಲ್ಪಾ ಶೆಟ್ಟಿ ಮತ್ತೊಮ್ಮೆ ತಾಯಿಯಾಗುತ್ತಿರುವುದು ನಿಜನಾ?