Publish Date: Mon, 18 Jun 2018 (12:55 IST)
Updated Date: Mon, 18 Jun 2018 (12:58 IST)
ಮುಂಬೈ : ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪೋಟೋವೊಂದು ಸಖತ್ ವೈರಲ್ ಆಗಿದ್ದು, ಈ ಪೋಟೊ ನೋಡಿದ ಹಲವರಲ್ಲಿ ಅವರು ಗರ್ಭಿಣಿಯಾಗಿದಾರಾ ಎಂಬ ಕುತೂಹಲ ಮೂಡಿಸಿದೆ.
ಹೌದು ಇತ್ತೀಚಿಗೆ ನಟಿ ಶಿಲ್ಪಾ ಶೆಟ್ಟಿ ಅವರು ಕೈನಲ್ಲಿ ರಿಪೋರ್ಟ್ ಇಟ್ಟುಕೊಂಡು ಡಯಾಗ್ನಿಸ್ಟಿಕ್ ಲ್ಯಾಬ್ ನಿಂದ ಹೊರಬರುವ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಪೋಟೊ ನೋಡಿ ಅವರ ಅಭಿಮಾನಿಗಳು ಶಿಲ್ಪಾ ಶೆಟ್ಟಿ ಅವರು ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ ಎಂದುಕೊಂಡಿದ್ದಾರೆ.
ಆದರೆ ಈ ವಿಚಾರದ ಬಗ್ಗೆ ನಟಿ ಶಿಲ್ಪಾ ಶೆಟ್ಟಿ ಅವರು ಟ್ವೀಟ್ ಮಾಡಿ ‘ಹೇ ಭಗವಾನ್ ನಾನು ಮುನ್ನೆಚ್ಚರಿಕಾ ಕ್ರಮವಾಗಿ ಎಸ್ ಆರ್ ಎಲ್ ಗೆ ತೆರಳಿ ನನ್ನ ದೇಹ ಹೊರಗಿನ ರೀತಿ ಕಾಣುವಂತೆ ಆರೋಗ್ಯವಾಗಿರುವುದೆ ಎಂಬುದನ್ನು ಪರೀಕ್ಷೆ ಮಾಡಿಸುತ್ತೇನೆ. ಇದನ್ನು ಎಲ್ಲರೂ ಮಾಡಬೇಕು. ಇಷ್ಟಕ್ಕೆ ಅವಾಂತರ, ನಾನು ಗರ್ಭಿಣಿ ಅಲ್ಲ’ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ