Publish Date: Mon, 18 Jun 2018 (12:20 IST)
Updated Date: Mon, 18 Jun 2018 (12:22 IST)
ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಈಗ ತಮ್ಮ ಮನೆಯನ್ನು ಬಿಟ್ಟು ಹೋಗಿದ್ದಾರಂತೆ. ಯಾಕೆ ಎನ್ನುವಂತಹ ಕುತೂಹಲ ಹಲವರಲ್ಲಿದೆ.
ಇದಕ್ಕೆ ಕಾರಣ ಇಷ್ಟೇ. ಬುಧವಾರ ದೀಪಿಕಾ ಅವರು ವಾಸವಾಗಿದ್ದ ಅಪಾರ್ಟ್ ಮೆಂಟ್ ಗೆ ಬೆಂಕಿ ಬಿದ್ದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜತೆಗೆ ನೀರಿನ ವ್ಯವಸ್ಥೆಯನ್ನು ನಿಲ್ಲಿಸಲಾಗಿದೆ. ಈ ಬಿಲ್ಡಿಂಗ್‌ನ ಮುಖ್ಯ ದ್ವಾರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈಗಾಗಲೇ ಕಟ್ಟಡದ ದುರಸ್ತಿ ಕಾಮಗಾರಿಯೂ ನಡೆದಿದ್ದು, ಇದು ಮುಗಿಯುವುದಕ್ಕೆ ಬರೋಬ್ಬರಿ ಎರಡು ವಾರಗಳು ಬೇಕಂತೆ. ಅಲ್ಲಿಯವರೆಗೆ ಈ ಕಟ್ಟಡದಲ್ಲಿ ವಾಸವಾಗಿದ್ದವರಿಗೆ ತಮ್ಮ ಸಂಬಂಧಿಕರ ಇಲ್ಲವೇ ಹೋಟೆಲ್‌ಗಳಲ್ಲಿ ತಂಗುವ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ದೀಪಿಕಾ ಅವರು ಕೂಡ ಈ ಮನೆಯಿಂದ ಬೇರೆ ಕಡೆ ಹೋಗಬೇಕಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ