Select Your Language

Notifications

webdunia
webdunia
webdunia
webdunia

ಒಂದು ಮಹತ್ತರವಾದ ಕೆಲಸಕ್ಕೆ ಮುಂದಾದ ಬಿಗ್ ಬಿ ಅಮಿತಾಬ್ ಬಚ್ಚನ್

ಒಂದು ಮಹತ್ತರವಾದ ಕೆಲಸಕ್ಕೆ ಮುಂದಾದ ಬಿಗ್ ಬಿ ಅಮಿತಾಬ್ ಬಚ್ಚನ್
ಮುಂಬೈ , ಶನಿವಾರ, 16 ಜೂನ್ 2018 (09:14 IST)
ಮುಂಬೈ : ಕೆಲವು ಸಿನಿಮಾ ತಾರೆಯರು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಎನಿಸಿಕೊಂಡಿರುವುದು ಮಾತ್ರವಲ್ಲ ಸಾಮಾಜಿಕ ಕಾರ್ಯಗಳಲ್ಲಿಯೂ ಕೂಡ ತಮ್ಮ ಸಹಾಯವನ್ನು ನೀಡುವುದರ ಮೂಲಕ ರಿಯಲ್ ಸ್ಟಾರ್ ಎನಿಸಿಕೊಂಡಿದ್ದಾರೆ. ಆ ಸಾಲಿಗೆ ಇದೀಗ ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಹೆಸರು ಕೂಡ ಕೇಳಿಬರುತ್ತಿದೆ.


ಹೌದು. ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಹುತಾತ್ಮರಾದ ಸೈನಿಕ ಪತ್ನಿಯರಿಗೆ ಹಾಗೂ ರೈತರಿಗೆ ಸಹಾಯ ಮಾಡಲು ಮುಂದೆ ಬಂದಿದ್ದು, ಅದಕ್ಕಾಗಿ ಅವರು 2 ಕೋಟಿ ರೂಪಾಯಿ ನೀಡಲಿದ್ದಾರಂತೆ. ಈ ಬಗ್ಗೆ ಸ್ವತಃ ಅಮಿತಾಬ್ ಅವರೇ ಟ್ವಿಟ್ಟರ್ ನಲ್ಲಿ ಖಚಿತ ಪಡೆಸಿದ್ದಾರೆ.


ವರದಿಗಳ ಪ್ರಕಾರ, ಅಮಿತಾಬ್ ಅವರು ಹುತಾತ್ಮ ಸೈನಿಕರ ಕುಟುಂಬಗಳಿಗೆ 1 ಕೋಟಿ ರೂ. ಮತ್ತು ರೈತರಿಗೆ 1 ಕೋಟಿ ರೂಪಾಯಿ ನೀಡಲು ಮುಂದಾಗಿದ್ದಾರೆ. ಯಾವ ಸಂಘಟನೆ ಫಲಾನುಭವಿಗಳಿಗೆ ಹಣವನ್ನು ನ್ಯಾಯವಾಗಿ ತಲುಪಿಸುತ್ತದೆ ಎಂಬ ಬಗ್ಗೆ ಸೂಕ್ತ ಮಾಹಿತಿ ಕಲೆ ಹಾಕಲು ಅವರು ಒಂದು ತಂಡವನ್ನು ನಿಯೋಜನೆ ಮಾಡಿದ್ದಾರಂತೆ. ಆದ್ರೆ  ಈ ಬಗ್ಗೆ ಅವರು ಅಧಿಕೃತವಾಗಿ ಎಲ್ಲೂ ಹೇಳಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಶ್ವಾನ ನೀತಿಗೆ ಪುಲ್ ಗರಂ ಆದ ನಟಿ ಐಂದ್ರಿತಾ ರೇ