ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಯಿ ಸಾಕಲು ಕಡ್ಡಾಯವಾಗಿ ಲೈಸೆನ್ಸ್ ಪಡೆಯಬೇಕು ಎಂಬ ಬಿಬಿಎಂಪಿ ನಿಯಮಕ್ಕೆ ಸ್ಯಾಂಡಲ್ ವುಡ್ ನಟಿ ಐಂದ್ರಿತಾ ರೇ ಅವರು ಪುಲ್ ಗರಂ ಆಗಿದ್ದಾರೆ.
									
			
			 
 			
 
 			
			                     
							
							
			        							
								
																	
ನಟಿ ಐಂದ್ರಿತಾ ರೇ ಅವರಿಗೆ ನಾಯಿಗಳೆಂದರೆ  ಪಂಚಪ್ರಾಣ. ಇತ್ತೀಚೆಗಷ್ಟೇ ಪ್ರಾಣಿಹಿಂಸೆಯ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಅವರು ಪೆಟಾ ಪ್ರಶಸ್ತಿ ಕೂಡ ಪಡೆದುಕೊಂಡಿದ್ದರು. ಇದೀಗ  ಅವರು ಅಪಾರ್ಟ್ಮೆಂಟ್ ಗಳು ಮತ್ತು ಪ್ರತ್ಯೇಕ ಸ್ವಂತ ಮನೆಗಳಲ್ಲಿ ಇಂತಿಷ್ಟೇ ನಾಯಿಗಳನ್ನು ಸಾಕಬೇಕೆಂಬ ನಿಯಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಈ ನಿಯಮವನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇದರ ಬದಲು ಬೀದಿ ನಾಯಿಗಳ ಸಂತಾನ ಹರಣ ಕಾರ್ಯಕ್ರಮ ಮಾಡಿ. ಜತೆಗೆ ಅಂಥ ನಾಯಿಗಳನ್ನು ದತ್ತು ತೆಗೆದುಕೊಳ್ಳುವುದರ ಬಗ್ಗೆ ಜಾಗೃತಿ ಮೂಡಿಸಿ’ ಎಂದು ಅವರು ಪಾಲಿಕೆಗೆ ಸಲಹೆ ಮಾಡಿದ್ದಾರೆ.
									
										
								
																	
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ