Select Your Language

Notifications

webdunia
webdunia
webdunia
webdunia

ರೈತರಿಗೆ ಕೃಷಿ ಮಾಡಲು ನಟಿ ಜೂಹಿ ಚಾವ್ಲಾ ಕೊಟ್ಟ ಸುಲಭ ಉಪಾಯವೇನು ಗೊತ್ತಾ?

ರೈತರಿಗೆ ಕೃಷಿ ಮಾಡಲು ನಟಿ ಜೂಹಿ ಚಾವ್ಲಾ ಕೊಟ್ಟ ಸುಲಭ ಉಪಾಯವೇನು ಗೊತ್ತಾ?
ಮುಂಬೈ , ಶುಕ್ರವಾರ, 15 ಜೂನ್ 2018 (10:53 IST)
ಮುಂಬೈ : ಕೃಷಿಗೆ ಅವಶ್ಯಕವಾದ ನೀರನ್ನು ಪೂರೈಸಲಾಗದೇ ತತ್ತರಿಸಿಹೋದ ರೈತರಿಗೆ ಇದೀಗ ಬಾಲಿವುಡ್ ನಟಿ ಜೂಹಿ ಚಾವ್ಲಾ ಅವರು ಸುಲಭವಾದ ಉಪಾಯವೊಂದನ್ನು ನೀಡಿ ಜನರ ಮೆಚ್ಚುಗೆ ಗಳಿಸಿದ್ದಾರೆ.


ಭಾರತದ ಕೃಷಿ ಪ್ರಧಾನ ದೇಶವಾದರೂ, ಬೇಸಾಯಕ್ಕೆ ಪೂರಕವಾದ ನೀರು ಸಮರ್ಪಕವಾಗಿ ದೊರೆಯದೆ ರೈತರು ಸಂಕಷ್ಟಕ್ಕೆ ಸಿಲುಕುತ್ತಿರುವುದನ್ನು ಮನಗೊಂಡ ನಟಿ ಜೂಹಿ ಚಾವ್ಲಾ ಅವರು ಬಾಳೆಯ ಕಾಂಡಗಳಲ್ಲಿ ಸಸ್ಯಗಳನ್ನು ಬೆಳೆಯುವ ಇಂಡೋಷ್ಯಾದ  ಕೃಷಿ ಪದ್ಧತಿಯನ್ನು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.


‘ಇಂಡೊನೇಷ್ಯಾದಲ್ಲಿ ಬಾಳೆಯ ಕಾಂಡಗಳಲ್ಲಿ ಸಸ್ಯಗಳನ್ನು ಬೆಳೆಯಲಾಗುತ್ತಿದ್ದು, ಅದರಲ್ಲಿ ಹೆಚ್ಚು ತೇವಾಂಶವಿರುವುದರಿಂದ ನೀರಿನ ಅಗತ್ಯತೆ ಉಂಟಾಗುವುದಿಲ್ಲ. ಬೆಳೆ ಕಟಾವಿನ ನಂತರ ಆ ಕಾಂಡವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದರಿಂದ ಭೂಮಿಯಲ್ಲೂ ಫಲವತ್ತತೆ ಹೆಚ್ಚುತ್ತದೆ. ಈ ಉಪಯುಕ್ತ ಮಾಹಿತಿಯನ್ನು ನಮ್ಮ ರೈತರಿಗೆ ತಿಳಿಸುವ ಮೂಲಕ ಜಲ ಸಂರಕ್ಷಣೆ ಮಾಡಲು ಹೆಚ್ಚು ಶೇರ್ ಮಾಡಿ’ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಅನೇಕರು ಮೆಚ್ಚುಗೆ ಕೂಡ ವ್ಯಕ್ತವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹರಿಪ್ರಿಯಾರ ಈ ಮಾನವೀಯತೆ ಗುಣಕ್ಕೆ ಯಾರೆಯಾದ್ರು ಸೆಲ್ಯೂಟ್ ಹೊಡೆಯಲೇ ಬೇಕು